ಲೋಕದರ್ಶನವರದಿ
ಶಿಗ್ಗಾವಿ10 : ತಾಲೂಕಿನ ಮಡ್ಲಿ ಕ್ರಾಸ್ ಬಳಿ ಇರುವ ಅಂಬುಜಾ ಫ್ಯಾಕ್ಟರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಡಾ. ಬಿ ಆರ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ ಎಸ್ ಮಾಳಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದ್ದಾರೆೆ.
ತಾಲೂಕಿನ ಗೊಟಗೋಡಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಮ್ಮ ಶಿಕ್ಷಣ ಸಂಸ್ಥೆಯಾದ ಅನುದಾನಿತ ಡಾ. ಬಿ ಆರ್ ಅಂಬೇಡ್ಕರ್ ಫ್ರೌಢ ಶಾಲೆಯನ್ನ ನಡೆಸುತ್ತಿದ್ದು ಈ ಶಾಲೆಯು ಪರಿಶಿಷ್ಟ ಜಾತಿಯ ಆಡಳಿತ ಮಂಡಳಿಯನ್ನು ಹೊಂದಿದೆ ಅಲ್ಲಿ 150-200 ವಿದ್ಯಾಥರ್ಿ, ವಿದ್ಯಾಥರ್ಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಇವರು ಪರಿಶಿಷ್ಟ ಜಾತಿಯ ಕಡು ಬಡವ ವಿದ್ಯಾಥರ್ಿಗಳಾಗಿದ್ದಾರೆ, ಶಾಲೆಯ 1 ಕಿಮೀ ಅಂತರದಲ್ಲಿರುವ ಅಂಬುಜಾ ಕಂಪನಿಯು ಬಿಡುವ ಪರಿಸರ ಮಾಲಿನ್ಯದಿಂದ ಮತ್ತು ತೀರ್ವ ದುವರ್ಾಸನೆ ಇರುವುದರಿಂದ ವಿದ್ಯಾಥರ್ಿಗಳಿಗೆ ತೊಂದರೆಯ ಜೊತೆಗೆ ರೋಗ ರುಜಿನಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದಿರುವ ಅವರು ಗೊಟಗೋಡಿಯ ಉತ್ಸವ್ ರಾಕ್ ಗಾರ್ಡನ್ ಇದ್ದು ಗಾರ್ಡನ್ ವೀಕ್ಷಿಸಲು ಸಾವಿರಾರು ಜನ ಬರುತ್ತಾರೆ ಜೊತೆಗೆ ಕನರ್ಾಟಕ ಜಾನಪದ ವಿಶ್ವವಿದ್ಯಾಲಯವೂ ಸಹಿತ ಇದ್ದು ಅವರಿಗೂ ತೊಂದರೆಯಾಗುತ್ತಿದೆ ಇದೆಲ್ಲವನ್ನೂ ಗಮನಿಸಬೇಕಾದ ಪರಿಸರ ಇಲಾಖೆ ಕಣ್ಮುಚ್ಚಿ ಕುಳಿತಿದೆ ಕೂಡಲೇ ಪ್ಯಾಕ್ಟರಿಯನ್ನು ಸ್ತಳಾಂತರಿಸಿ ವಿದ್ಯಾಥರ್ಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಿ ಸಂಬಂದಪಟ್ಟವರಿಗೆ ಆದೇಶ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.