ಅಂಬೇಡ್ಕರ್ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಚಿಂತಕ

ಲೋಕದರ್ಶನ ವರದಿ

ರಾಯಬಾಗ 26: ವಿಶ್ವಕ್ಕೆ ಮಾದರಿಯಾಗಿರುವ ಭಾರತ ಸಂವಿಧಾನ ರಚಿಸಿರುವ ಡಾ.ಬಿ.ಆರ್.ಅಂಬೇಡ್ಕರ್ರವರು ಇಂದು ಜಗತ್ತಿಗೆ ಜ್ಞಾನದ ಬೆಳಕು ಎಂದು ಗುರ್ತಿಸಲ್ಪಟ್ಟಿದ್ದಾರೆ ಎಂದು ಶಿಕ್ಷಕ ಬಿ.ಎಲ್.ಘಂಟಿ(ಪಾಟೀಲ) ಹೇಳಿದರು. ಮಂಗಳವಾರ ಪಟ್ಟಣದ ತಾ.ಪಂ.ಸಭಾಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ತಾಲೂಕು ಸಮಿತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನ ಪ್ರಯುಕ್ತ ಭಾರತ ಸಂವಿಧಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ರವರು ಶೋಷಿತ, ಬಡವರ, ದಿನದಲಿತರಿಗೆ ಸಂವಿಧಾನದಲ್ಲಿ ನ್ಯಾಯ ಒದಗಿಸಿಕೊಟ್ಟು, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು. 

ಪ್ರಸ್ತಾವಿಕವಾಗಿ ಮಾತನಾಡಿದ ಕ.ದ.ಸಂ.ಸಮಿತಿರಾಜ್ಯ ಸಂಘಟನಾ ಸಂಚಾಲಕ ರಾಜು ತಳವಾರ ಅವರು, ಇಂದಿನ ರಾಜಕೀಯ ಸ್ಥಿತಿಯಲ್ಲಿ ಸಂವಿಧಾನಕ್ಕೆ ಅನೇಕ ತಿದ್ದುಪಡಿ ಮಾಡುವುದರ ಮೂಲಕ ಅಂಬೇಡ್ಕರರವರು ರಚಿಸಿದ ಮೂಲ ಸಂವಿಧಾನಕ್ಕೆ ಧಕ್ಕೆ ತರುವಂತಹ ಕಾರ್ಯ ಮಾಡುತ್ತಿರುವುದನ್ನು ಖಂಡೀಸಿದರು.ಇನ್ನುವರೆಗೂ ಅಂಬೇಡ್ಕರ್ರವರ ಚಿಂತನೆ ಮತ್ತು ವಿಚಾರಗಳನ್ನು ಅರ್ಥಮಾಡಿಕೊಳ್ಳಲು ದೇಶದ ಜನರಿಗೆ ಸಾಧ್ಯವಾಗದೇ ಇರುವುದು ವಿಷಾದನೀಯವಾಗಿದೆ. ಭಾರತ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಯುವ ಪೀಳಿಗೆ ತಿಳಿದುಕೊಳ್ಳಬೇಕಾಗಿರುವುದು ಇಂದು ಅತ್ಯಂತ ಮಹತ್ವದ್ದಾಗಿದೆ ಎಂದರು. ಬಿಇಒ ಎಚ್.ಎ.ಭಜಂತ್ರಿ ಮತ್ತು ತಾ.ಪಂ.ಇಒ ಪ್ರಕಾಶ ವಡ್ಡರ ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು. ತಾಲೂಕು ಸಂಚಾಲಕ ಸಿದ್ದು ಕಾಂಬಳೆ ಅಧ್ಯಕ್ಷತೆಯನ್ನು ವಹಿಸಿದ್ದರು. ತಾ.ಪಂ.ಸದಸ್ಯ ನಾಮದೇವ ಕಾಂಬಳೆ, ಸಿಡಿಪಿಒ ಸಂತೋಷ ಕಾಂಬಳೆ, ಪಿಡ್ಲ್ಯುಡಿಅಧಿಕಾರಿ ಆರ್.ಕೆ.ನಿಂಗನೂರೆ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೆ.ಟಿ.ಕಾಂಬಳೆ ಸೇರಿದಂತೆಅನೇಕರು ಉಪಸ್ಥಿತರಿದ್ದರು. ಎಸ್.ಡಿ.ರಾಯಮಾನೆ ಸ್ವಾಗತಿಸಿ, ನಿರೂಪಿಸಿದರು.