ಅಂಬೇಡ್ಕರ್ ದೇಶ ಕಂಡ ಮಹಾನ್ ನಾಯಕ: ಬಂಟನೂರ
ತಾಳಿಕೋಟಿ 14: ಭಾರತದ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ಆರ್ಥಿಕ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ದೇಶ ಭಕ್ತ ಎಂದು ಪ್ರಾಚಾರ್ಯರು ಡಾ. ಆರ್.ಎಮ್. ಬಂಟನೂರ ಹೇಳಿದರು.
ತಾಳಿಕೋಟೆ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಡಾ. ಬಿ.ಆರ್ . ಅಂಬೇಡ್ಕರ್ ಅವರ 134ನೇ ಜಯಂತಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತಾ ಅಂಬೇಡ್ಕರ್ ಅವರು ಕಾಲೇಜಿನಲ್ಲಿ ಉಪನ್ಯಾಸ ಮಾಡಿ ಹಣವನ್ನ ಕೂಡಿಹಾಕಿ, ಶಿಷ್ಯವೇತನ ಹಾಗೂ ಆತ್ಮೀಯ ಗೆಳೆಯರಿಂದ ಸಿಗುವ ಅಲ್ಪಸ್ವಲ್ಪ ಹಣವನ್ನು ಪಡೆದು ಉನ್ನತ ವ್ಯಾಸಂಗವನ್ನು ಮಾಡಿ ಕಷ್ಟಪಟ್ಟು ಲಂಡನ್ನಿನಲ್ಲಿ ತಮ್ಮ ಅಧ್ಯಯನವನ್ನು ಮುಗಿಸಿದರು. ಭಾರತದ ಜನತೆಗೆ ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ ಎಂದು ಕರೆ ನೀಡಿದರು, ದೇಶದಲ್ಲಿ ಎಲ್ಲಾ ಜನರಿಗೆ ಉಪಯುಕ್ತವಾಗುವ ಸಂವಿಧಾನವನ್ನು ರಚಿಸಿಕೊಟ್ಟ ಮಹಾನ್ ನಾಯಕರು ಬಾಬಾ ಸಾಹೇಬ ಅಂಬೇಡ್ಕರ್ ಎಂದು ಹೇಳಿದರು.
ನನ್ನ ಭಾರತ ಅಡಿಯಲ್ಲಿ ಪಾದಯಾತ್ರೆಯನ್ನು ಕಾಲೇಜಿನಿಂದ ಹಮ್ಮಿಕೊಂಡು ಜಯಪುರ ಸರ್ಕಲ್, ಶಿವಾಜಿ ಚೌಕ್, ಕತ್ರಿ ಬಜಾರ್, ಅಂಬೇಡ್ಕರ್ ಸರ್ಕಲ್ ನಿಂದ ಕಾಲೇಜಿಗೆ ಬರಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಸಂವಿಧಾನ ಪೂರ್ವ ಪೀಠಿಕೆಯ ಪ್ರತಿಜ್ಞಾವಿಧಿಯನ್ನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಎ.ಎ. ಗಂಗನಗೌಡರ ಬೋಧಿಸಿದರು. ಕಾಲೇಜಿನ ಸರ್ವಸಿಬ್ಬಂದಿ ವರ್ಗ ಹಾಗೂ ಪ್ರಥಮ, ತೃತೀಯ ಸೆಮಿಸ್ಟರ್ನ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಐಶ್ವರ್ಯ ಚವ್ಹಾಣ ಪ್ರಾರ್ಥಿಸಿದರು. ನೀಲಮ್ಮ ಮಂಗ್ಯಾಳ ಸ್ವಾಗತಿಸಿ ಪರಿಚಯಿಸಿದರು. ಸಂಗೀತ ಯರಗಲ್ ವಂದಿಸಿದರು. ಅಮಿರಾಬಿ ಜಮಾದಾರ ನಿರೂಪಿಸಿದರು.