ನೀತಿ ಸಂಹಿತೆ ಹೆಸರಿ ಕಾಟಾಚಾರಕ್ಕೆ ಅಂಬೇಡ್ಕರ್ ಜಯಂತಿ: ಭಂಡಾರಿ

ಸಿದ್ದಾಪ16:ನೀತಿ ಸಂಹಿತೇ ಹೆಸರಿನಲ್ಲಿ ಸರಕಾರ ಕಾಟಾಚಾರಕ್ಕೆ ಅಂಬೇಡ್ಕರ್ ದಿನಾಚರಣೆ ಆಚರಿಸುತ್ತಿರುವುದು ಖೇದದ ಸಂಗತಿ.  ನಮ್ಮಲ್ಲಿ ಹಲವು ಧಾಮರ್ಿಕ ಹಬ್ಬಗಳಿಗಿಲ್ಲದ ನೀತಿ ಸಂಹಿತೆಅಂಬೇಡ್ಕರ್ ದಿನಾಚರಣೆಗೆ ಯಾಕೆ ಗೊತ್ತಿಲ್ಲ ಎಂದು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ವಿಠ್ಠಲ ಭಂಡಾರಿ ಹೇಳಿದರು.

ಅವರು ತಾಲೂಕಿನ ಎಂ.ಜಿ.ಸಿ ಮಹಾವಿದ್ಯಾಲಯದಲ್ಲಿ ನಡೆದ ಅಂಬೇಡ್ಕರ್ ದಿನಾಚರಣೆಯಲ್ಲಿ  ಮಾತನಾಡಿದರು. ಚುನಾವಣೆಯ ಸಂದರ್ಭವಾಗಿರುವುದರಿಂದ ಸಕರ್ಾರವೇ ಮುಂದೆ ನಿಂತು ಎಲ್ಲೆಡೆ ಭಾರತ ಸಂವಿಧಾನ, ಅದರ ಆಶಯ ಮತ್ತು ಕೊಡುಗೆಯ ಕುರಿತು ಸಂವಾದ, ಉಪನ್ಯಾಸಗಳನ್ನು ದೊಡ್ಡ ಪ್ರಮಾಣದಲ್ಲಿ ಏರ್ಪಡಿಸಬೇಕಾಗಿತ್ತು. ಮತದಾರರನ್ನು ಅದರಲ್ಲಿ ಒಳಗೊಳ್ಳಿಸುವ ಕೆಲಸ ಮಾಡಬೇಕಾಗಿತ್ತು. ಸಂವಿಧಾನ ಎಷ್ಟೇ ಉತ್ತಮವಾಗಿರಬಹುದು. ಆದರೆ ಅದನ್ನು ಜಾರಿಗೆ ತರುವವರು ಕೆಟ್ಟವರಾಗಿದ್ದರೆ ಸಂವಿಧಾನವೂ ವಿಫಲವಾಗುತ್ತದೆ.

ಅಂಬೇಡ್ಕರರನ್ನು ಕೇವಲ ದಲಿತ ನಾಯಕರೆಂದು ಪ್ರಚಾರ ಮಾಡುವ ಮೂಲಕ ಅವರ ಇನ್ನಿತರ ಕೊಡುಗೆಯನ್ನು ಉದ್ದದೇಶ ಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಅಂಬೇಡ್ಕರ್ ಅವರನ್ನು ನಮ್ಮ ಪಠ್ಯಪುಸ್ತಕ ಪುಸ್ತಕದಲ್ಲಿಯೂ ಕೂಡ ಸರಿಯಾಗಿ ಪರಿಚಯಿಸಲಿಲ್ಲ. ಸಧ್ಯ ನಾವು ಎದುರಿಸುತ್ತಿರುವ ರಾಜಕೀಯ ಅನೈತಿಕತೆಗೆ ಪ್ರಜಾಪ್ರಭುತ್ವ ಎದುರಿಸುತ್ತಿರುವ ಬಿಕ್ಕಟ್ಟಿಗೆ ಒಂದು ಪರಿಹಾರ ಸೂಚಿಸಬಹುದು ಎಂದರು.

ಪ್ರಾಚಾರ್ಯ ಜಯಂತಿ ಶಾನಭಾಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ "ಸಂವಿಧಾನ ರಚನೆಯಲ್ಲಿ ಡಾ.ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಅದರಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮದ ದುರ್ಭಲರನ್ನು ಮೇಲೆತ್ತುವ ಅಗತ್ಯತೆಯನ್ನು ಮತ್ತು ಜಾರಿಯ ರೀತಿಯನ್ನು ಹೇಳಿದ್ದಾರೆ.  ಎಂದರು.

ಉಪಪ್ರಾಚಾರ್ಯರಾದ ಡಾ.ಸುರೇಶಗುತ್ತೀಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಂ.ಎಸ್. ವಿನಾಯಕ, ಪ್ರೊ.ಜಗನ್ನಾಥ ಮೊಗೇರ, ಸಾವಿತ್ರಿಬಾಯಿ, ದೇವರು ಚಲವಾದಿ, ಮಂಜು ಮತ್ತು ವಿದ್ಯಾಥರ್ಿ ಕಾರ್ಯದಶರ್ಿಯಾದ ಭವ್ಯಾ ಹೆಗಡೆ, ಎನ್ಎಸ್ಎಸ್ ಘಟಕದ ನಾಯಕಿಯಾದ ಪೂಣರ್ಿಮಾ ಭಟ್, ಸ್ವಯಂ ಸೇವಕರಾದ ಅಮಿತ, ನಂದೀಶ, ಗೌತಮ ಮೊದಲಾದವರು ಹಾಜರಿದ್ದರು.