ಲೋಕದರ್ಶನ ವರದಿ
ಗದಗ 14: ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘ ಸಂಯುಕ್ತ ಆಶ್ರಯದಲ್ಲಿ ಡಾ ಬಿ.ಆರ್ ಅಂಬೇಡ್ಕರ್ರವರ 129ನೇ ಜಯಂತಿಯನ್ನು ಆಚರಿಸಿದರು.
ಈ ಸಭೆಯಲ್ಲಿ ಎಎಸ್ ಗೌಡರ ಹಾಗೂ ಬಸವಂತಪ್ಪ ಎಚ್ ತಳವಾರ, ಎಂಎಚ್ ಜಂತ್ಲಿ, ಮೈಲಾರಪ್ಪ ಕಡಿಯವರ, ಮಲ್ಲಪ್ಪ ಕಡಿಯವರ, ಮಳಿಯಪ್ಪ ಕಡಿಯವರ, ಆನಂದ ದೊಡ್ಮನಿ, ಪ್ರಕಾಶ್ ಕಡಿಯವರ, ಮೋಹನ್ ಹಾದಿಮನಿ, ಸಂತೋಷ್ ಹಾದಿಮನಿ, ರಾಘವೇಂದ್ರ ಕಡಿಯವರ, ಎಸ್ ಆರ್ ಕಡಿಯವರ, ಆನಂದ ಕಡಿಯವರ, ಮುಂತಾದವರಿದ್ದರು. ನಂತರ ಬಸವಂತಪ್ಪ ಎಚ್ ತಳವಾರ್ ಮಾತನಾಡಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸಂವಿಧಾನ ರಚಿಸಿ, ದೇಶಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು, ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು, ಮಹಾನ್ ಮಾನವತಾವಾದಿ 'ಡಾ.ಬಿ.ಆರ್.ಅಂಬೇಡ್ಕರ್ ರವರು ಇವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದೇ ಕರೆಯುತ್ತಾರೆ.
ಭಾರತದ ಸಂವಿಧಾನವು ನವೆಂಬರ್ 26, 1949ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಜನೆವರಿ 26, 1950 ರಂದು ಜಾರಿಗೆ ತರಲಾಯಿತು. ಈ ದಿನ ಸಂವಿಧಾನವನ್ನು ಇಡೀ ಭಾರತ ಒಪ್ಪಿಕೊಂಡ ದಿನದ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯಂತೆ 2015ರಿಂದ 'ಸಂವಿಧಾನ ದಿನ'ವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.