ವಿಜಯಪುರ 20: ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ವಿಶೇಷ ನಾಲ್ಕು ದಿನದ ಡಾ. ಬಾಬಾಸಾಹೇಬರ ಅಂಬೇಡ್ಕರ್ ರವರ ಜಯಂತೋತ್ಸವದ ನಿಮಿತ್ಯವಾಗಿ "ಅಂಬೇಡ್ಕರ್ ಕಪ್ " ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಸಂಚಾಲಕರಾದ ಅಕ್ಷಯ್ ಕುಮಾರ್ ಅಜಮನಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಕಾಲೇಜು ಮತ್ತು ವಸತಿ ನಿಲಯ ವಿದ್ಯಾರ್ಥಿಗಳಿಗೆ ಈ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರಲಿದೆ.
ಫೈನಲ್ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 15000 ಸಾವಿರ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡುವ ತಂಡಕ್ಕೆ ದ್ವಿತೀಯ ಬಹುಮಾನ 10, 000 ಸಾವಿರ ಬಹುಮಾನ ಇರಲಿದೆ.
ಭಾಗವಹಿಸುವರು ಕಡ್ಡಾಯವಾಗಿ ನೋಂದಣಿ ಪತ್ರದಲ್ಲಿ ಕಾಲೇಜು / ವಸತಿ ನಿಲಯ ಮುಖ್ಯಸ್ಥರ ಪರವಾನಿಗೆ ಪತ್ರ ತರಬೇಕು. ನೋಂದಣಿಯನ್ನು 26/03/2025 ರ ಒಳಗಾಗಿ ಮಾಡಿಕೊಳ್ಳಬೇಕು. ಪ್ರವೇಶ ಶುಲ್ಕ 1100 ರೂ ಮಾತ್ರ ಇರಲಿದೆ.
ಪಂದ್ಯಾವಳಿಗಳು ಜಿಲ್ಲಾ ಪಂಚಾಯತಿ ಆವರಣದಲ್ಲಿ ಇರುವ ಮೈದಾನದಲ್ಲಿ ನಡೆಯಲಿದೆ. ಭಾಗಿಯಾಗುವ ಎಲ್ಲಾ ಕ್ರೀಡಾ ಪಟುಗಳಿಗೆ ಕ್ರೀಡೆಯಲ್ಲಿ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಗುಹುದು. ಹೆಚ್ಚಿನ ಮಾಹಿತಿಗಾಗಿ 9739396446, 8088160436, 8431626548 ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಅಕ್ಷಯ್ ಕುಮಾರ್ ಅಜಮನಿ ತಿಳಿಸಿದ್ದಾರೆ.