ಛಲವಾದಿ ಮಹಾಸಭೆಯಿಂದ ಅಂಬೇಡ್ಕರ್, ಛತ್ರಪತಿ ಶಾಹುಮಹಾರಾಜ್ ಜಯಂತಿ ಆಚರಣೆ


ಲೋಕದರ್ಶನ ವರದಿ

ಬಳ್ಳಾರಿ23: ನಗರದ ಡಾ|| ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಛಲವಾದಿ ಮಹಾಸಭದ ಅಧ್ಯಕ್ಷ ಸಿ ನರಸಪ್ಪನವರ  ನೇತೃತ್ವದಲ್ಲಿ ಡಾ||ಬಿ.ಆರ್ ಅಂಬೇಡ್ಕರ್ ಅವರ 127ನೇ ಜಯಂತಿ ಹಾಗೂ ಸಮಾನತೆಯ ಅರಿಕಾರ ಛತ್ರಪತಿ ಶಾಹುಮಹಾರಜ್ ಅವರ 145ನೇ ಜಯಂತಿಯನ್ನು ಆಚರಿಸಲಾಯಿತು.     ಡಾ||ರಾಜೇಂದ್ರ ಪ್ರಸಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಛತ್ರಪತಿ ಶಾಹುಮಹಾರಜ್ ಅವರ ಕುರಿತು ಮಾತನಾಡಿದರು. ಡಾ||ಬಿ.ಆರ್ ಅಂಬೇಡ್ಕರ್ ಅವರು ಅತ್ಯಂತ ಪ್ರಭಾವಕಾರಿ ವ್ಯೆಕ್ತಿಯಾಗಿ ದಲಿತರ ಶಕ್ತಿಯಾಗಿ ರೂಪಗೊಳ್ಳುವಲ್ಲಿ ಛತ್ರಪತಿ ಶಾಹುಮಹಾರಜ್ ಅವರ ಪಾತ್ರ ಪ್ರಮೂಖವಾದದು. ಹಾಗೂ ಎಸ್.ಸಿ/ಎಸ್ ಟಿ ಮತ್ತು ಓಬಿಸಿಗಳಿಗೆ ಭಾರತದಲ್ಲಿ ಪ್ರಪ್ರಥಮವಾಗಿ ಶೇ.50 ರಷ್ಟು ಮಿಸಲಾತಿಯನ್ನು ತಂದಿರುವಂತಹ ವ್ಯೆಕ್ತಿ ಛತ್ರಪತಿ ಶಾಹುಮಹಾರಜ್ ಅವರಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಪಕ ಚೆನ್ನಸ್ವಾಮಿ ಸೊಸಲೇ, ಶಿಕ್ಷಕರಾದ ರಮೇಶ್ ಸುಗ್ಗೆನಹಳ್ಳಿ ಅಭಿಪ್ರಾಯ ಪಟ್ಟರು. ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಕಾರ್ಯದಶರ್ಿಗಳು, ಹಾಗೂ ಗ್ರಾಮಗಳಿಂದ ಆಗಮಿಸಿರುವ ಕುಲಭಾಂದವರು ಸಂಘಟಿತರಾಗಿ ಸಕರ್ಾರದ ಸೌಲಬ್ಯಗಳನ್ನು ಪಡೆಯಲು ನಾವೆಲ್ಲರೂ ಬಲವಂತರಾದಾಗ ಮಾತ್ರ ಸೌಲಬ್ಯಗಳನ್ನು ಪಡೆಯಲು ಸಾದ್ಯ ಎಂದು ಜಿಲ್ಲಾಧ್ಯಕ್ಷ ನರಸಪ್ಪ ವೆಂಕಟಪ್ಪ ಅಪ್ಪಗೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದಶರ್ಿ ಶಿವಕುಮಾರ್, ಪ್ರಾಸ್ತವಿಕವಾಗಿ ಮಾತನಾಡಿದರು. ಮಲ್ಲಯ್ಯ, ಸೋಮಶೇಖರ್, ಸಿ.ಶಂಕರ್, ಸಂಗನಕಲ್ಲು ತಿಪ್ಪೆಸ್ವಾಮಿ, ಗೋನಾಳ ಯಂಕಪ್ಪ, ಮನೋಹರ, ಮದನ್ ಗೊವಿಂದ ಸೇರಿದಂತೆ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಶೋಭೆ ತಂದರು.