ಲೋಕದರ್ಶನ ವರದಿ
ಶಿರಹಟ್ಟಿ 12: ಚಂದಗೆಟ್ಟವರೆಲ್ಲ ಬಂದೇರಿ, ದೋಣಿಯನು ನಾನು ದಾಟಬಲ್ಲೆ, ನಿಮ್ಮನ್ನೂ ದಾಟಿಸಬಲ್ಲೆ, ಶಿವನೊಂದೆ ಎಂದು ಗೊಯ್ದೆಳುಹುವೆ ಎಂದು ಹೇಳಿದ ಅಂಬಿಗರ ಚೌಡಯ್ಯ ಹನ್ನೆರಡನೇ ಶತಮಾನದ ಮಹಾನ್ ದಾರ್ಶನಿಕನಾಗಿದ್ದಾರೆ ಎಂದು ತಾಲೂಕಿನ ಕಡಕೋಳ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಎಂ ಎಫ್ ಹಾಡಕರ ಅವರು ತಿಳಿಸಿದರು.
ಅವರು ಪಟ್ಟಣದ ಆರ್.ಬಿ ಕಮತ ಅವರ ಮಹಾಮನೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕ ಘಟಕದಿಂದ ಜರುಗಿದ ಶರಣ ಪೌಣರ್ಿಮೆ-53ರ ದಂಭದ ವೈರಿ ಅಂಬಿಗರ ಚೌಡಯ್ಯ ಎಂಬ ವಿಷಯದ ಮೇಲೆ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಸಂಸಾರವೆಂದ ಸಾಗರದಲ್ಲಿ ಮನುಷ್ಯ ಹೇಗೆ ಈಜಿ ದಡ ಸಾಗಬೇಕೆಂಬುದನ್ನು ಅಂಬಿಗರ ಚೌಡಯ್ಯ ವಿವರಿಸಿದ್ದಾರೆ. ಬಡತನಕ್ಕೆ ಇಡುವ ಚಿಂತೆ, ಗಳಿಸುವ ಚಿಂತೆ, ಹೆಂಡಿರ ಚಿಂತೆ, ಮಕ್ಕಳ ಚಿಂತೆ, ಬದುಕಿನ ಚಿಂತೆ, ಮರಣದ ಚಿಂತೆ ಇತ್ಯಾದಿಗಳ ಚಿಂತೆಗಳ ಮಧ್ಯ ಶಿವನ ಚಿಂತೆ ಮಾಡುವವರಾರನೂ ನಾನು ಕಾಣೆ ಎಂದು ಈಗಿನ ಸಮಾಜದ ಡಾಂಭಿಕತನವನ್ನು ತನ್ನ ವಚನಗಳಲ್ಲಿ ಅಂಬಿಗರ ಚೌಡಯ್ಯ ಹೇಳಿದ್ದಾರೆ ಎಂದು ಮಾತನಾಡಿದರು.
ಕಾರ್ಯಕ್ರಮದ ಉದ್ಗಾಟನೆಯನ್ನು ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ನಿವೃತ್ತ ಪ್ರೋ: ಶ್ರೀಕಾಂತ ಮಂಗಸೂಳಿ ನೆರವೇರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಶಿರಹಟ್ಟಿ ಪಟ್ಟಣದಲ್ಲಿ ಅನೇಕ ಸಾಹಿತ್ತಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುವುದು ನನಗೆ ತುಂಬಾ ಖುಷಿಯಿದೆ ಇನ್ನೂ ನೂರಾರು ಇಂಥಹ ಕಾರ್ಯಕ್ರಮಗಳು ಜರುಗಲಿ ಎಂದು ಆಶಿಸಿದರು.
ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಪ್ರೋ: ಫಕ್ಕೀರೇಶ ಅಕ್ಕಿ ಮಾತನಾಡಿ, ಅಂಬಿಗರ ಚೌಡಯ್ಯ ತಮ್ಮ ಹೆಸರಿನಿಂದಲೇ ವಚನಗಳನ್ನು ರಚಿಸಿ ಕನ್ನಡದ ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಕಾಣಿಕೆ ನೀಡಿದ್ದು, ಅವರು ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರದವರಾಗಿದ್ದು, ಈಗಲೂ ತುಂಗಭದ್ರಾ ನದಿ ದಡದಲ್ಲಿ ಅವರ ಸಮಾಧಿಯನ್ನು ಕಾಣಬಹುದಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀಗಳಾದ ಚಂದ್ರಶೇಖರ ಕೋಟಿ, ಕ.ಸಾಪ ತಾಲೂಕಾಧ್ಯಕ್ಷ ಎಂ.ಕೆ ಲಮಾಣಿ, ವಾಣಿ ಕಮತ, ಮಲ್ಲವ್ವ ಕಮತ, ಲಲಿತಾ ಪಾಟೀಲ, ಮಧುಮತಿ ಪಾಟೀಲ, ಶಾಂತಾ ಹಳ್ಳಿ, ಶಾರದಾ ಅಕ್ಕಿ, ಚೈತ್ರಾ ಸಂಕನಗೌಡರ, ವಿಜಯಲಕ್ಷ್ಮೀ ಮಾಲಸೂರೆ, ವಿಭೂಷಾ ಪಾಟೀಲ, ಪ್ರಕಾಶ ನರಗುಂದೆ, ಗಣಪತಿ ಶೇಳಕೆ, ಹಾಲಪ್ಪ ಬೀಡನಾಳ, ಹಾಲಯ್ಯ ಹಿರೇಮಠ, ಜಿ.ಕೆ ಹಳ್ಳಿ, ವಿ.ಬಿ ಕೆಂಚನಗೌಡರ, ಎಸ್.ಎಲ್ ಮುಳಗುಂದ, ಬಸವರಾಜ ತುಳಿ, ಬಸವರಾಜ ಕರ್ಜಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.
ಎಚ್.ಎಂ.ದೇವಗಿರಿ ಸ್ವಾಗತಿಸಿದರು, ವೆಂಕಟೇಶ ಅರ್ಕಸಾಲಿ ಸ್ವಾಗತಿಸಿದರು, ಎಂ.ಎ ಮಕಾನದಾರ ನಿರೂಪಿಸಿದರು, ವಿನಾಯಕ ಹಣಗಿ ವಚನ ಸಾಹಿತ್ಯ ನಡೆಸಿಕೊಟ್ಟರು.