ಶಾಲಾ ಮಕ್ಕಳಿಗೆ ಅಂಬೇಡ್ಕರ್, ಗಾಂಧಿ ಚಲನಚಿತ್ರ ಪ್ರದರ್ಶನ

ಕೊಪ್ಪಳ 11: ಕೊಪ್ಪಳ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು ಇವರ ವತಿಯಿಂದ ನಗರದ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೋರಾರ್ಜಿ  ದೇಸಾಯಿ ವಸತಿ ಶಾಲೆಯಲ್ಲಿ ಇಂದು (ಫೆ.11) ಆಯೋಜಿಸಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಗಾಂಧೀ ಸಿನಿಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.  

ಪ್ರಾಂಶುಪಾಲರಾದ ಗೌರಮ್ಮ ಹಕ್ಕಿ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಜೀ ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಮಂತರಲ್ಲಿ ಪ್ರಮುಖರಾಗಿದ್ದು, ಇವರ ಬಾಲ್ಯ ಜೀವನ ಮತ್ತು ಸಾಧನೆಗಳನ್ನು ಕುರಿತಾದ ಚಲನಚಿತ್ರಗಳನ್ನು ನೋಡುವುದರ ಮೂಲಕ ಅವರ ತತ್ವ ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಲಯದ ಮೇಲ್ವಿಚಾರಕರಾದ ಗುರುನಾಥ ಹಾಗೂ ಶಿಕ್ಷಕರಾದ ಮಂಜುಳಾ, ಭಾಗ್ಯಶ್ರೀ, ಶಕುಂತಲಾ, ಶೈಲಶ್ರೀ, ಪುಂಡಲೀಕ ಪೂಜಾರ, ಮಹೇಶ, ಚೆನ್ನಯ್ಯ ವಿ. ಹಿರೇಮಠ, ಲಿಂಗೇಶ ಬಿ, ಗವಿಸಿದ್ದಪ್ಪ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಹಾಜರಿದ್ದರು.