ಅಲೆಮಾರಿ ಗ್ರಂಥಾಲಯ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ
ಹೊಸಪೇಟೆ 14: ಬುಡ್ಗ ಜಂಗಮ ಕಾಲೋನಿಯಲ್ಲಿ ಇಂದು ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್‌ರವರ 134ನೇ ಜನ್ಮದಿನಾಚರಣೆ ಆಚರಿಸಲಾಯಿತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಭವಂತರು, ವಿದ್ಯಾವಂತರು, ದೇಶಪ್ರೇಮಿಗಳು ಹಾಗೂ ಪ್ರಮಾಣಿಕರು ಕಾನೂನು ತಜ್ಞರು, ರಾಜಕೀಯ ತಜ್ಞರು, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ತಜ್ಞರು ಆಗಿದ್ದರು. ದೇಶ-ವಿದೇಶಗಳಲ್ಲಿ ವಿದ್ಯಾ ಪಡೆದು ತಮ್ಮ ಬದುಕಿನ ಜೀವನ ಸಾಮಾಜಕ್ಕೆ ಅರ್ಿಸಿದ ಮಹಾತ್ಮರಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ರಾಗಿರುತ್ತಾರೆ. ಇವರ ಜಯಂತೋತ್ಸವ ಪ್ರತಿ ವರ್ಷದಂತೆ ನಡೆಸುತ್ತಾ ನಮಗೆಲ್ಲ ಸಂತೋಷದ ಸಂಭ್ರಾಚರಣೆಯಾಗಿದೆ ಎಂದರು.
ಅಂಬೇಡ್ಕರ್ ಅವರ ಈ ದೇಶದ ಬಡವರ ಆಶಾಕಿರಣ ಹಾಗೂ ತಳ ಸಮುದಾಯಗಳ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ರಾಜಕವಾಗಿ ಅತಿ ಹಿಂದುಳಿದ ಸಮುದಾಯಗಳ ಮುಖ್ಯ ವಾಹಿನಿಗೆ ತರವ ಮೂಲಕ ದೇಶದ ಉದ್ಧಾರಕ್ಕಾಗಿ ಮಹಿಳೆಯರಿಗೆ ಸಮಾನತೆ ಹಕ್ಕು ಹಾಗೂ ಜನರ ಏಳಿಗೆಗಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟವರು, ಸಂವಿಧಾನದಲ್ಲಿ ಹಲವಾರು ಜನಪರ ಹಕ್ಕುಗಳು ನೀಡಿದರು. ಎಲ್ಲರೂ ಸಮರಸ್ಯದಿಂದ ಬದುಕುಬೇಕೆಂಬ ಗುರಿಯೊಂದಿಗೆ ಸಂವಿಧಾನ ರಚಿಸುವ ಮೂಲಕ ಶಿಕ್ಷಣ, ಸಂಘಟನೆ, ಹೋರಾಟ ಮೂರು ಸೂತ್ರಗಳು ಹಾಕಿ ಜನರ ಜಾಗೃತಿಗಾಗಿ ಕಾರಣರಾದ ಡಾ. ಬಿ.ಆರ್.ಅಂಬೇಡ್ಕರ್. ಅವರ ಜಯಂತಿ ಅಂಗವಾಗಿ ಹೊಸಪೇಟೆ ನಗರದ ಬುಡ್ಗಜಂಗಮ ಕಾಲೋನಿಯ ಅಲೆಮಾರಿ ಗ್ರಂಥಾಲಯ ಕಾರ್ಯಾಲಯದಲ್ಲಿ ರಾಜ್ಯ ಬೇಡ ಬುಡ್ಗಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಸಣ್ಣಮಾರೆಪ್ಪ ರವರು ಅಂಬೇಡ್ಕರ್ ಮತ್ತು ಬಾಬುಜಗಜೀವನ್ ರಾಮ ಅವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಅಲೆಮಾರಿ, ಅರೆಅಲೆಮಾರಿ ಮತ್ತು ವಿಮುಕ್ತಿಬುಡಕಟ್ಟುಗಳ ಒಕ್ಕೂಟದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶೇಖಪ್ಪ ಕಿನ್ನೂರಿ, ವಿಜಯನಗರ ಜಿಲ್ಲಾ ಹಂಡಿಜೋಗಿ ಸಮಾಜದ ಜಿಲ್ಲಾಧ್ಯಕ್ಷರಾದ ಜೆ.ರಮೇಶ್, ಜಿಲ್ಲಾ ಒಕ್ಕೂಟದ ಸದಸ್ಯರಾದ ಡಿ.ಶೇಖರ್, ಅಲೆಮಾರಿ ಗ್ರಂಥಾಲಯ ಮೇಲ್ವಿಚಾರಕರಾದ ಪಕ್ಕೀರ್ಪ ಬಾದಿಗಿ, ಬುಡ್ಗಜಂಗಮ ಕಾಲೋನಿಯ ಮುಖಂಡರುಗಳಾದ ಡಿ.ಜಂಬಣ್ಣ, ಡಿ.ಮಾರೇಶ್ ಎಂ.ಹೊನ್ನೂರ್ಪ, ಇತರರು ಭಾಗವಹಿಸಿ, ಇಂದು ಬೆಳಗ್ಗೆ 09:00ಕ್ಕೆ ಈ ಕಾರ್ಯಕ್ರಮವನ್ನು ನೆರವೆರಿಸಲಾಯಿತು.