ರಾಣೆಬೆನ್ನೂರು ನಗರದಲ್ಲಿ ಅಂಬೇಡ್ಕರರ 68ನೇ ಮಹಾ ಪರಿನಿರ್ವಾಣ ದಿನಾಚರಣೆ
.ರಾಣೇಬೆನ್ನೂರ 08: ಈ ದೇಶ ಕಂಡ ಮಹಾನ ನಾಯಕರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಸಹ ಓರ್ವರು. ಅವರ 68 ನೇ ಪುಣ್ಯತಿಥಿಯನ್ನೇ ಭಾರತದಲ್ಲಿ ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಅವರು ಇಲ್ಲಿನ ಸಂಗಮ ವೃತ್ತದ ಬಳಿ ತಾಲೂಕ ದಲಿತ ಸಂಘರ್ಷ ಒಕ್ಕೂಟದ ಆಶ್ರಯದಲ್ಲಿ ನಡೆಸಲಾದ ಅಂಬೇಡ್ಕರ್ ಅವರ 68ನೇ ಮಹಾ ಪರಿ ನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಭಾರತ ದೇಶಕ್ಕೆ ಅಂಬೇಡ್ಕರ ಇವರು ನೀಡಿರುವ ಕೊಡುಗೆಗಳು ಅಪಾರ. ಅವರ ಜೀವನ ಹಾಗೂ ಪರಂಪರೆ ಸರ್ವರಿಗೂ ಆದರ್ಶಪ್ರಿಯವಾದದ್ದು.
ಡಾ. ಭೀಮಾರಾವ್ ರಾಮ್‌ಜಿ ಅಂಬೇಡ್ಕರ್ ಅವರು ಸಮಾಜ ಸುಧಾರಕರೂ ಆಗಿದ್ದರು. ದಲಿತ ಬೌದ್ಧ ಚಳುವಳಿಯನ್ನು ಮುನ್ನಡೆಸುವ ಮೂಲಕ ಪ್ರೇರಣೆಯಾದವರು ಎಂದರು. ತಾಲೂಕ ದಲಿತ ಸಂಘರ್ಷ ಒಕ್ಕೂಟದ ಅಧ್ಯಕ್ಷ ಮೈಲಪ್ಪ ದಾಸಪ್ಪನವರ್ ಮಾತನಾಡಿ ಅಂಬೇಡ್ಕರ್ ಅವರು ಒಂದು ಸಮಾಜಕ್ಕೆ ನಾಯಕರಲ್ಲ. ಸರ್ವ ಜನಾಂಗದ ನಾಯಕರ ಜೊತೆಗೆ ಸಮಸ್ತ ಭಾರತಕ್ಕೆ ಅವರು ಮಹಾನನಾಯಕರಾಗಿದ್ದಾರೆ. ಅವರ ಆದರ್ಶಗಳನ್ನು ಸರ್ವರು ಜೀವನದಲ್ಲಿ ರೂಪಿಸಿ ಕೊಳ್ಳಬೇಕು ಎಂದರು. ಮಾಜಿ ಶಾಸಕ ಅರುಣಕುಮಾರ್ ಪೂಜಾರ್, ತಹಸೀಲ್ದಾರ ಆರ್ ಎಚ್ ಭಾಗವಾನ್, ಸಮಾಜ ಕಲ್ಯಾಣಾಧಿಕಾರಿ ಪಿ . ವಸಂತ, ಸಿಪಿಐ ಶಂಕರ್, ಪಿಎಸ್‌ಐ ಗಡ್ದೆಪ್ಪ ಗುಂಜುಟಗಿ, ಮಲ್ಲೇಶಪ್ಪ ಮೆಣಸಿನಾಹಾಳ, ಪ್ರಕಾಶ್ ಪೂಜಾರ, ಪ್ರಕಾಶ್ ಬುರುಡಿಕಟ್ಟಿ, ಶಶಿಧರ ಬಸೇನಾಯ್ಕರ, ರವೀಂದ್ರಗೌಡ ಪಾಟೀಲ್. ಚಂದ್ರಣ್ಣ ಬೇಡರ್, ನಿತ್ಯಾನಂದ ಕುಂದಾಪುರ, ನಾಗರಾಜ್ ಕುಡುಪಲಿ, ಅಜೇಯ ಮಠದ, ಬಸವರಾಜ ತಳವಾರ ಸೇರಿದಂತೆ ನಗರಸಭೆ ಪೌರಕಾರ್ಮಿಕರು ಸಿಬ್ಬಂದಿ ವರ್ಗದವರು, ಮತ್ತಿತರರು ಭಾಗವಹಿಸಿದ್ದರು.