ದಾರ್ಶನಿಕರು, ತಂದೆ-ತಾಯಿಗಳನ್ನು ಸದಾ ಸ್ಮರಿಸಿ: ಮುಕ್ತಾಯಕ್ಕ

ಲೋಕದರ್ಶನರವದಿ

ರಾಣೇಬೆನ್ನೂರು20: ಭರತ ಭೂಮಿಯ ಮೇಲೆ ಜನ್ಮವೆತ್ತಿದ ಪ್ರತಿಯೊಬ್ಬರೂ ತಮಗೆ ಜನ್ಮ ನೀಡಿದ ಹೆತ್ತವರನ್ನು, ಸರಿ ದಾರಿಗೆ ತಂದ ಮಾರ್ಗದರ್ಶಕರನ್ನು, ಪಾಠ ಬೋಧಿಸಿದ  ಗುರುಗಳನ್ನು, ಸಮಾಜದ ಹಿರಿಯರನ್ನು, ದಾರ್ಶನೀಕರನ್ನು, ಮಹಾತ್ಮರನ್ನು ದಿನಂಪ್ರತಿ ಅವರುಗಳ ಉತ್ತಮ ಗುಣಗಳನ್ನು ಸ್ಮರಣೆ ಹಾಗೂ ಆರಾಧನೆ ಮಾಡುವುದರಿಂದ ದು:ಖ-ದುಮ್ಮಾನಗಳು ಕಡಿಮೆಯಾಗಿ ಮನಸ್ಸು ಪ್ರಪುಲ್ಲಗೊಳ್ಳುತ್ತದೆ ಎಂದು ಬಸವಕೇಂದ್ರದ ಶರಣೆ ಮುಕ್ತಾಯಕ್ಕ ಹೇಳಿದರು.

   ಅವರು  ತಾಲೂಕಿನ ಕವಲೆತ್ತು ಗ್ರಾಮದ ಬಸವಕೇಂದ್ರದಲ್ಲಿ ನಡೆದ 4ನೇ ಶರಣ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  ಪ್ರತಿಯೊಬ್ಬರೂ ಬದುಕಿನ ಭವಿಷ್ಯದ ಮತ್ತು ಭದ್ರತೆಗೆ ಮಾರ್ಗದರ್ಶನ ನೀಡಿ ಸರಿ ದಾರಿಗೆ ತಂದ ಮಾರ್ಗದರ್ಶಕರನ್ನು ಸ್ಮರಿಸದಿದ್ದರೆ ಮಾನವ ಜನ್ಮಕ್ಕೆ ಯಾವುದೇ ಅರ್ಥವಿರಲಾರದು ಎಂದರು.  

    ಸದಾ ಕಾಲ ನಮ್ಮನ್ನು ಉದ್ಧರಿಸಿದವರನ್ನು ಸ್ಮರಿಸುವುದರಿಂದ ದೇವಾನು-ದೇವತೆಗಳು ಹತ್ತಿರವಾಗುತ್ತಾರೆಂದು ಪುರಾಣಗಳಿಂದ ತಿಳಿದು ಬರುತ್ತದೆ.

        ಜಗಜ್ಯೋತಿ ಬಸವಣ್ಣನವರ ವಚನಗಳನ್ನು ಪ್ರತಿದಿನ ಪಠಣ ಮಾಡುವುದರಿಂದ ಜೀವನದುದ್ದಕ್ಕೂ ಸು:ಖ-ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯ. ಈ ದಿಸೆಯಲ್ಲಿ ಇಂತಹ ಧರ್ಮ ಕಾರ್ಯಕ್ರಮದಲ್ಲಿ  ಭಕ್ತರು ಭಾಗವಹಿಸಿ ಪುನಿತರಾಗುವುದರ ಜೊತೆಗೆ ಧಾಮರ್ಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು ಎಂದರು.

   ಚಂದ್ರಪ್ಪ ಬೇಡರ್, ಹಿರಿಯ ವಕೀಲ ಎಂ.ಎಫ್  ಕುಸಗೂರ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಭಕ್ತರು ಇದ್ದರು