ಲೋಕದರ್ಶನ ವರದಿ
ಶೇಡಬಾಳ: ಸೋತವರು ನೂರಾರು ಕಾರಣಗಳನ್ನು ಹುಡುಕಿದರೆ ಜಯ ಸಾಧಿಸಿದವರು ತಮ್ಮ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವನ್ನು ಹೇಳುತ್ತಾರೆ. ವಿದ್ಯಾಥರ್ಿ ಜೀವನದಲ್ಲಿ ಪಠ್ಯ ಮೊದಲು ಮತ್ತು ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿ, ಉನ್ನತ ಸಾಧನಕ್ಕೇರುವ ಕನಸು ಕಂಡರೆ ನಿಜವಾಗಿಯೂ ಎನನ್ನೂ ಸಾಧಿಸಬಹುದು.
ಅಂತಹ ಸಾಧನೆಯನ್ನು ಕುಮಾರಿ ಆರತಿ ಜಬರ್ದಸ್ತ್ ತಳವಾರ ಅವರು ಮಾಡಿ, ಇತರರಿಗೆ ಮಾದರಿಯಾಗಿದ್ದಾಳೆಂದು ಪ್ರಾಚಾರ್ಯ ಡಾ. ಎಸ್.ಓ. ಹಲಸಗಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇತ್ತೀಚಿಗೆ ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ ಮತ್ತು ಕ್ರೀಡಾ ವಿಭಾಗದವರು ಆಯೋಜಿಸಿದ ಆರತಿ ಜಬರ್ದಸ್ತ್ ತಳವಾರ ಅವರ ಸತ್ಕಾರ ಸಮಾರಂಭದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅವರು ಮುಂದುವರೆದು ಕುಮಾರಿ ಆರತಿ ಭಾರತೀಯ ಸೇನೆಯ ಮಹಿಳಾ ಪೊಲೀಸ್ ಹುದ್ದೆಗೆ ಆಯ್ಕೆಯಾಗಿ ಸಂಸ್ಥೆಗೆ ಕೀತರ್ಿ ತಂದಿದ್ದಾಳೆ. ಎಲ್ಲರೂ ಆರತಿ ಎತ್ತಿ ಅಭಿನಂದನೆ ಹೇಳುವ ಕಾರ್ಯಗೈಯ್ದಿದ್ದಾಳೆಂದು ಹೇಳಿದರು.
ಅತಿಥಿಯಾಗಿದ್ದ ನಿವೃತ್ತ ಪ್ರಾಚಾರ್ಯ ಡಾ. ಜಿ.ಜಿ.ಕರಲಟ್ಟಿಯವರು ಮಾತನಾಡಿ ಯಾವಾಗಲೂ ಆಸಕ್ತಿಯಿಂದ ಎಲ್ಲದರಲ್ಲೂ ಭಾಗವಹಿಸುತ್ತಿದ್ದ ಆರತಿಯವರು ಉತ್ತಮ ಕ್ರೀಡಾಪಟು ಸಹಿತವಾಗಿದ್ದು, ಹೆಮ್ಮೆಯ ಸಾಧನೆ ಮಾಡಿದ್ದಾರೆಂದು ಹೇಳಿದರು. ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಪ್ರೊ. ಎಸ್.ಎಸ್. ಬಾಗನೆಯವರು ಮಾತನಾಡಿ, ಜಿಲ್ಲೆಯ ಸಾವಿರಾರು ಅಭ್ಯಥರ್ಿಗಳಲ್ಲಿ ಕೇವಲ ಎಳು ಮಹಿಳೆಯರು ಭತರ್ಿಯಾಗಿದ್ದು, ಅವರಲ್ಲಿ ನಮ್ಮ ವಿದ್ಯಾಥರ್ಿನಿಯು ಒಬ್ಬಳಾಗಿದ್ದು, ಅಭಿಮಾನದ ಸಂಗತಿ. ಅದಕ್ಕೆ ಅವರ ಶ್ರಮ, ಸಾಮಾಥ್ರ್ಯ ಮತ್ತು ಪ್ರತಿಭೆಗಳೇ ಕಾರಣವೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಸಿ.ಸಿ ಅಧಿಕಾರಿ ಮೇಜರ್ ವ್ಹಿ.ಎಸ್. ತುಗಶೇಟ್ಟಿಯವರು, ಮಹಾವಿದ್ಯಾಲಯದ ಘಟಕವು ಉತ್ತಮ ತರಬೇತಿ ನೀಡುತ್ತಿದೆ. ಪ್ರತಿವರ್ಷ ಸಾಕಷ್ಟು ವಿದ್ಯಾಥರ್ಿಗಳು 'ಬಿ' ಮತ್ತು 'ಸಿ' ಸಟರ್ಿಫಿಕೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ. ಮತ್ತು 6 ರಿಂದ 8 ಕೆಡೆಟ್ಗಳು ಸೇನೆಗೆ ಭತರ್ಿಯಾಗಿ ದೇಶ ಸೇವೆಗೆ ತೊಡಗುತ್ತಾರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸತ್ಕಾರ ಸ್ವೀಕರಿಸಿ ಆರತಿ ತಳವಾರ ತಮ್ಮ ಅನುಭವದ ಮಾತುಗಳನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಂಡರು.
ವೇದಿಕೆ ಮೇಲೆ ವಿದ್ಯಾಥರ್ಿ ಕಲ್ಯಾಣಾಧಿಕಾರಿ ಪ್ರೊ. ಬಿ.ಎ.ಪಾಟೀಲ, ಬೆಳಗಾವಿ ಬಟಾಲಿಯನ್ದ ತ್ರಿಲೋಕ ತೋಮರ್ ಮತ್ತು ಪಪ್ಪು ರೂಕೆ ಉಪಸ್ಥಿತರಿದ್ದರು. ಎನ್.ಸಿ.ಸಿ ಜೊತೆಗೆ ಇವಳು ಚೆಸ್ ಕ್ರೀಡೆಯಲ್ಲಿ ಅಂತರ್ ಕಾಲೇಜು ಸ್ಪಧರ್ೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾಳೆಂದು ದೈಹಿಕ ನಿದರ್ೇಶಕರಾದ ಪ್ರೊ. ಆರ್.ಎಸ್.ನಾಗರಡ್ಡಿಯವರು ಅಭಿಪ್ರಾಯಿಸಿದರು.
ಮೇಜರ್ ವ್ಹಿ.ಎಸ್.ತುಗಶೆಟ್ಟಿ ಸ್ವಾಗತಿಸಿದರು. ಕುಮಾರಿ ಪೂಜಾ ತೇಲಿ ವಂದಿಸಿದರು. ಕಾರ್ಯಕ್ರಮವನ್ನು ಡಾ. ಎಸ್.ಎ.ಕಕರ್ಿಯವರು ನಿರೂಪಿಸಿದರು. ಎನ್.ಸಿ.ಸಿಯ ನೂರಾರು ಕೆಡೆಟ್ಗಳು ಉಪಸ್ಥಿತರಿದ್ದರು.