ಉಪ ಜೀವನಕ್ಕಾಗಿ ಅವಕಾಶ ಕೊಡಿ' ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಆಗ್ರಹ

'

ಬೆಳಗಾವಿ : ಅಂಧರ ಕ್ರಿಕೆಟ್ ಪಟುಗಳಿಗೆ ಅನುಕಂಪ ಬದಲು ಜೀವನ ಸಾಗಿಸಲು ಅವಕಾಶ ಮಾಡಿ, ನಮಗೆ ಪ್ರಶಸ್ತಿ, ಪುರಸ್ಕಾರದ ಅವಶ್ಯಕತೆ ಇಲ್ಲ. ಉಪ ಜೀವನಕ್ಕಾಗಿ ಸಕರ್ಾರಿ ಉದ್ಯೋಗ ನೀಡುವಂತೆ ಭಾರತ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ರಾಜ್ಯ ಸಕರ್ಾರವನ್ನು ಆಗ್ರಹಿಸಿದರು. 

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ರಿಕೆಟ್ ಕ್ರೀಡೆಯಿಂದ ನಿವೃತ್ತಿ ಬಳಿಕ ಎಲ್ಲ ಅಂಧ ಕ್ರಿಕೆಟ್ ಪಟುಗಳು ಉದ್ಯೋಗ ಇಲ್ಲದೇ ಮನೆಯಲ್ಲಿ ಕೂರುವಂತಾಗಿದೆ. ನಾವೂ ದೇಶಕ್ಕಾಗಿಯೇ ಆಡುತ್ತಿದ್ದೇವೆ. ಸಕರ್ಾರ ನಮಗೆ ಅನುಕಂಪ ತೋರಿಸುವ ಬದಲು ಉದ್ಯೋಗ ಅವಕಾಶ ನೀಡುವಂತೆ ಕೋರಿದರು. 

ನಾನು 2012 ಮತ್ತು 2014ರಲ್ಲಿ ಅಂಧರ ಕ್ರಿಕೆಟ್ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿ ಆಟವಾಡಿದ್ದೇನೆ. ಆ ಸಂದರ್ಭದಲ್ಲಿ ಅಂಧರ ಕ್ರಿಕೆಟ್ ವಿಶ್ವ ಕಪ ಗೆದ್ದು ಸಾಧನೆ ಮಾಡಲಾಗಿದೆ. ಈ ಸಾಧನೆಯಲ್ಲಿ ಭಾಗಿಯಾದ ಬೇರೆ ರಾಜ್ಯದ ಸಹದ್ಯೋಗಿಗಳಿಗೆ ಆಯಾ ಸರಕಾರಗಳು ಸಾಕಷ್ಟು ಸವಲತ್ತುಗಳನ್ನು ನೀಡಿವೆ. ಆದರೆ ಕನರ್ಾಟಕ ಸರಕಾರ ಯಾವುದೇ ಸವಲತ್ತು ಇಲ್ಲಿನ ಕ್ರೀಡಾಪಟುಗಳಿಗೆ ನೀಡಿಲ್ಲ ಎಂದು ಅವರು ಅರೋಪಿಸಿದರು. ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಐವರಿಗೆ ಕೇರಳ ಸಕರ್ಾರ ಉದ್ಯೋಗ ನೀಡಿದೆ.

ಕೇರಳ ಮಾದರಿಯಲ್ಲಿ ನಮಗೂ ಉದ್ಯೋಗ ಕಲ್ಪಿಸಲು ರಾಜ್ಯ ಸಕರ್ಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇರಳ ರಾಜ್ಯದ ಅಂಧ ಕ್ರಿಕೆಟ್ ಆಟಗಾರರಿಗೆ ಅಲ್ಲಿನ ಸರಕಾರ ಉದ್ಯೋಗ, ಸಾಲ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅವರಿಗೆ ಉನ್ನತ ಮಟ್ಟದ ಜೀವನ ನಡೆಸಲು ಅವಕಾಶ ಕಲ್ಪಿಸಿದೆ.ಆದರೆ  ಕನರ್ಾಟಕದ ಕ್ರಿಡಾಪಟುಗಳಿಗೆ ಯಾವುದೇ  ಸವಲತ್ತುಗಳು ಇಲ್ಲಿಯವರೆಗೆ ನೀಡಿಲ್ಲ. ಅಂಧ ಕ್ರೀಡಾಪಟುಗಳು ಸಂಕಷ್ಟದ ದಿನಗಳಲ್ಲಿ ಕಾಲ ಕಳೆಯುತ್ತಿದ್ದು, ಅವರಿಗೆ ಬೇರೆ ರಾಜ್ಯಗಳ ಮಾದರಿಯಲ್ಲಿ ವಿಶೇಷ ಸವಲತ್ತುಗಳನ್ನು ನೀಡಬೇಕೆಂದು ಅವರು ರಾಜ್ಯ ಸರಕಾರವನ್ನು 

ಒತ್ತಾಯಿಸಿದರು.