ಆಸ್ತಿಯ ಸರಳಿಕರಣಕ್ಕೆ ಆನ್ಲೈನ್ ಮೂಲಕ ಫಾರಂ ನಂ 3 ಹಂಚಿಕೆ
ಕೊಪ್ಪಳ 02: ಆನ್ಲೈನ್ ತಂತ್ರಾಂಶದ ಆನ್ಲೈನ್ ಸಾರ್ವಜನಿಕರಿಗೆ ಅವರ ಆಸ್ತಿಯ ಫಾರಂ ನಂಬರ್ 3 ನಮೂನೆಯನ್ನು ವಿತರಿಸುವಲ್ಲಿ ಸರಳಿಕರಣ ಗೊಳಿಸಲಾಗಿದೆ ಇದರ ಉಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ನಗರದ ಜನತೆಗೆ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಕರೆ ನೀಡಿದ್ದಾರೆ.
ಅವರು ಸೋಮವಾರ ನಗರದ ವಿವಿಧ ಒಟ್ಟು ಒಂಬತ್ತು ಕಡೆ ನಮೂನೆ 3 ಕೊಡುವ ಕೇಂದ್ರದ ವ್ಯವಸ್ಥೆ ನಗರ ಸಭೆ ವತಿಯಿಂದ ಮಾಡಲಾಗಿದ್ದು ಇವೆಲ್ಲ ಸ್ಥಳಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿ ಆನ್ಲೈನ್ ಕೇಂದ್ರಕೆ ಚಾಲನೆ ನೀಡಿ ಅಲ್ಲಿಯ ಉಪಸ್ಥಿತರಿದ್ದ ಸಾರ್ವಜನಿಕರಿಗೆ ಮನವರಿಕೆ ಮಾಡಿದ ಆವರು ಜನರಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡದೆ ಅನಾವಶ್ಯಕ ವಿಳಂಬ ಮಾಡದೆ ಅವರ ಆಸ್ತಿಯ ನಮೂನೆ ಮೂರನ್ನು ನಿಗದಿತ ಅವಧಿಯೊಳಗೆ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪೌರಾಯುಕ್ತರಾದ ಗಣಪತಿ ಪಾಟೀಲ್ ನಗರಸಭೆ ಸದಸ್ಯರಾದ ಗುರುರಾಜ್ ಹಲಗೇರಿ ಸೇರಿದಂತೆ ಎಂಡಿ ಜಹೀರ್ ಅಲಿ ಮತ್ತಿತರರು ಪಾಲ್ಗೊಂಡಿದ್ದರು.