ಅಥಣಿ 26: (ಶಿವಪುತ್ರಯಾದವಾಡ) ರಾಜ್ಯ ಸರಕಾರರಿಂದ ಮಂಜೂರಾತಿ ಪಡೆದಿರುವ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು. ಪಟ್ಟಣದ ಗವಿಸಿದ್ದ ಮಡ್ಡಿಯಲ್ಲಿರುವ ಸರಕಾರಿ ಜಾಗದಲ್ಲಿ ಆಶ್ರಯ ಮನೆಗಳ ನಿಮರ್ಾಣಕ್ಕೆ ಆಸ್ಪದ ನೀಡಲಾಗುವುದು. ಎಂದು ಶಾಸಕ ಮಹೇಶ ಕುಮಟಳ್ಳಿ ತಿಳಿಸಿದ್ದಾರೆ.
ಸ್ಥಳಿಯ ಶಾಸಕರ ಗೃಹ ಕಚೇರಿಯಲ್ಲಿ ಫಲಾನುಭವಿಗಳು ಗವಿಸಿದ್ದ ಮಡ್ಡಿ ಮನೆ ನಿಮರ್ಾಣಕ್ಕಾಗಿ ನೀಡಿದ್ದ ಮನವಿ ಸ್ವೀಕರಿಸಿ ಮಾತನಾಡುತ್ತಿದ್ದರು. ಇದೇ ಸಮಯದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರೊಂದಿಗೆ ಮತ್ತು ತಹಸೀಲ್ದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚಚರ್ಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ, ಫಲಾನುಭವಿಗಳಿಂದ ಅಜರ್ಿ ಪಡೆದು ಸಕಲಾಕ್ಕೆ ಸರಕಾರ ನೀಡುವ ಆಶ್ರಯ ಮನೆಗಳ ಮಂಜೂರಾತಿ ತೆಗೆದುಕೊಂಡು ವಿತರಿಸುವ ಕಾರ್ಯಕ್ಕೆ ಪ್ರಾಧ್ಯಾನತೆ ನೀಡಲಾಗುವುದ ಎಂದರು.