ಪ್ರವಾಹದಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡದೆ ಬೇರೆಯವರಿಗೆ ಹಂಚಿಕೆ ಆರೋಪಿಸಿ ಮುತ್ತಿಗೆ

Alleged distribution to others without compensation to flood victims and siege

ಜಮಖಂಡಿ 30: ತಾಲೂಕಿನ ತುಬಚಿ, ಶೂರ್ಪಾಲಿ ಗ್ರಾಮಗಳಲ್ಲಿ ಪ್ರವಾಹದಲ್ಲಿನ ನಿಜವಾದ ಸಂತ್ರಸ್ತರನ್ನು ಬಿಟ್ಟು ಬೇರೆಯವರಿಗೆ ಪರಿಹಾರ ಧನ ನೀಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ ಸದಾಶಿವ ಮಕ್ಕೋಜಿ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ನಡೆಯಿತು. 

ನಗರದ ತಾಪಂ ಕಚೇರಿ ಆವರಣದಲ್ಲಿ ತುಬಚಿ, ಶೂರ​‍್ಾಲಿ ಗ್ರಾಮಗಳಿಂದ ಆಗಮಿಸಿದ್ದ ಸಂತ್ರಸ್ಥರು ಗ್ರಾಮದ ಪ್ರಮುಖರು, 524ಮಿ. ನೀರು ಬಂದರು ಅವರ  ಜಮಿನುಗಳಿಗೆ ನೀರು ಬರುವದಿಲ್ಲ, ಅಂತವರ ಜಮಿನುಗಳನ್ನು ಸರ್ವೆ ವರದಿಯಲ್ಲಿ ಸೇರಿಸಿದ್ದಾರೆ, ಪ್ರವಾಹ ಸಂದರ್ಭದಲ್ಲಿ ಜಮಿನು ಮುಳುಗಿ ಬೆಳೆ ಹಾಳಾದ ನಿಜವಾದ ಸಂತ್ರಸ್ಥರಿಗೆ ಇನ್ನೂವರೆಗೂ ಪರಿಹಾರ ಬಂದಿಲ್ಲ ಇದಕ್ಕೆ ಕಾರಣಿ ಭೂತರಾದ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಕೂಡಲೇ ಅಮಾನತು ಮಾಡಿ ತನಿಖೆ ಮಾಡಬೇಕೆಂದು ಆಗ್ರಹಿಸಿದರು. 

ಇದನ್ನು ಪ್ರಶ್ನಿಸಿದರೆ ತಲಾಟಿ ಅವರು ನೀವು 10 ಸಾವಿರ ರೂ, ಕೋಡ್ರಿ ನಿಮಗೂ ಪರಿಹಾರ ಬರುವಂತೆ ಮಾಡುತ್ತೆವೆ ಎನ್ನುತ್ತಾರೆ ಎಂದು ಆರೋಪಿಸಿದರು. 

ಗ್ರಾಮಗಳಲ್ಲಿನ ಪರಿಹಾರ ಸರ್ವೆ ವರದಿಯಲ್ಲಿ ಹೆಸರು ಸೆರಿಸುವದಕ್ಕಾಗಿ 13ರಿಂದ 14ಲಕ್ಷಕ್ಕೂ ಅಧಿಕ ಹಣ ಭ್ರಷ್ಠಾಚಾರ ನಡೆದಿದೆ ಇದನ್ನು ತನಿಖೆ ನಡೆಸಬೇಕು. 203 ಎಕರೆ ಪ್ರದೇಶ ಜಮೀನು ಮುಳುಗಡೆಯಾಗುವುದಿಲ್ಲ ಆದರೂ ಅಷ್ಟ ಪ್ರದೇಶ ಜಮೀನು ಸರ್ವೆ ವರದಿಯಲ್ಲಿ ಸೇರಿದೆ. ನಿಮ್ಮ ಕಚೇರಿಯಲ್ಲಿ ಯಾರಾ​‍್ಯರಿಗೆ ಹಣ ಸಂದಾಯವಾಗಿದೆ ಎಂದು ದಾಖಲೆ ಕೇಳಿದರೆ ಯಾರು ಕೊಡುತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದಕ್ಕೆ ವರದಿಯಲ್ಲಿನ ಲೋಪದೋಷಗಳನ್ನು ಪರೀಶೀಲಿಸಿ ಕ್ರಮ ಜರುಗಿಸುವದಾಗಿ ತಹಸೀಲ್ದಾರ ಸದಾಶಿವ ಮಕ್ಕೋಜಿ ತಿಳಿಸಿದರು. 

ಇದೇ ಸಂದರ್ಭದಲ್ಲಿ ಸುರೇಶಗೌಡ ಪಾಟೀಲ, ಸಾಗರ ಪಾಟೀಲ, ನಿಂಗಪ್ಪ ಬಳೊಲ, ಬಸವರಾಜ ಕನಬೂರ, ಶಿಕಂದರ ನದಾಫ, ಶ್ರೀಶೈಲ ದಳವಾಯಿ, ಮಲ್ಲಪ್ಪ ಕೆಂಪನವರ, ಉಮೇಶ ಪಾಟೀಲ, ಅನ್ನಪ್ಪ ಅಂಬಿ ಸೇರಿದಂತೆ ಅನೇಕರು ಇದ್ದರು.