ವಾಷಿಂಗ್ಟನ್, ನ 7: ಸೌದಿ ಅರೆಬಿಯಾದ ಕಂಪನಿಯ ಮಾಹಿತಿಯನ್ನು ಕದ್ದ ಆರೋಪದ ಮೇಲೆ ಇಬ್ಬರು ಟ್ವಿಟರ್ ನ ಮಾಜಿ ಉದ್ಯೋಗಿಗಳ ಮೇಲೆ ಅಮೆರಿಕ ಪ್ರಕರಣ ದಾಖಲಿಸಿದೆ. ವಾಷಿಂಗ್ಟನೆ ಪೋಸ್ಟ್ ಪ್ರಕಾರ, ಅಮೆರಿಕದ ಪ್ರಜೆ ಅಹಮದ್ ಅಬೌಮೋ ಎಂಬಾತ ಮೂವರು ವ್ಯಕ್ತಿಗಳ ಟ್ವಿಟರ್ ಖಾತೆಯ ಮೇಲೆ ಗೂಢಾಚಾರಿಕೆ ನಡೆಸಿದ್ದು, ಇದರಲ್ಲಿ ರಿಯಾದ್ ಸರ್ಕಾಋದ ಪರವಾಗಿ ಸೌದಿ ನಾಯಕತ್ವದ ಕುರಿತು ಆಂತರಿಕ ಕೆಲಸಗಳೂ ಕೂಡ ಒಳಗೊಂಡಿವೆ. ಅಮೆರಿಕ ಸಾಮಾಜಿಕ ಜಾಲತಾಣಗಳನ್ನು ವಿದೇಶಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ಬೆಳಕಿಗೆ ಬಂದಿದೆ.