ನವದೆಹಲಿ, 21 ಚುನಾವಣಾ ಬಾಂಡ್ ಯೋಜನೆಯನ್ನು ಸಕರ್ಾರ ದುರಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಲೋಕಸಭೆಯ ಶೂನ್ಯ ವೇಳೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಗುರುವಾರ ಸಭಾತ್ಯಾಗ ನಡೆಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿ, ಚುನಾವಣಾ ಬಾಂಡ್ ಗಳ ಯೋಜನೆ ಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಸದನದ ಗಮನಕ್ಕೆ ತರಲು ಬಯಸುವುದಾಗಿ ಹೇಳಿದರು. ಈ ಮೊದಲು ಚುನಾವಣಾ ಬಾಂಡ್ ಯೋಜನೆ ಕೇವಲ ಸಾರ್ವತ್ರಿಕ ಚುನಾವಣೆಗೆ ಮಾತ್ರ ಸೀಮಿತವಾಗಿತ್ತು. ಲೋಕಸಭಾ ಚುನಾವಣೆಗಳಿಗೆ ಮಾತ್ರ ಚುನಾವಣಾ ಬಾಂಡ್ ಗಳನ್ನು ಬಿಡುಗಡೆಗೊಳಿಸಲು ಈ ಹಿಂದೆ ನಿಬಂಧನೆ ರೂಪಿಸಲಾಗಿತ್ತು. ಆದರೆ, ರಿಸವರ್್ ಬ್ಯಾಂಕ್ ಹಾಗೂ ಚುನಾವಣಾ ಆಯೋಗ ತೀವ್ರ ವಿರೋಧದ ನಡುವೆಯೂ ಚುನಾವಣಾ ಬಾಂಡ್ ಗಳನ್ನು ಸಕರ್ಾರ ಬಿಡುಗಡೆಗೊಳಿಸಲಾಗಿದೆ ಎಂದು ದೂರಿದರು. ತನ್ನ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಹಾರಗಳನ್ನು ಚುನಾವಣಾ ಬಾಂಡ್ ಗಳ ಯೋಜನೆ ಮೂಲಕ ಮುಚ್ಚಿಹಾಕಲಾಗಿದೆ ಎಂದು ಮನೀಷ್ ತಿವಾರಿ ಆರೋಪಿಸಿದರು ಇದಕ್ಕೂ ಮುನ್ನ ಪ್ರಶ್ನೋತ್ತರ ಅವಧಿಯಲ್ಲೂ ಕಾಂಗ್ರೆಸ್ ಸದಸ್ಯರು ಚುನಾವಣಾ ಬಾಂಡ್ ಹಾಗೂ ಸಕರ್ಾರಿ ಸ್ವಾಮ್ಯದ ಉದ್ಯಮಗಳಲ್ಲಿನ ಬಂಡವಾಳ ವಾಪಸ್ಸಾತಿ ಕುರಿತ ಸಕರ್ಾರ ನಿಧರ್ಾರ ವಿರೋಧಿಸಿದಾಗ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿತ್ತು ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಧಾನ ಪ್ರತಿಪಕ್ಷದ ಸದಸ್ಯರು ಸಭಾಧ್ಯಕ್ಷರ ಮುಂದಿನ ಅಂಗಳಕ್ಕೆ ತೆರಳಿ ಚುನಾವಣಾ ಬಾಂಡ್ ಹಾಗೂ ಸಕರ್ಾರಿ ಸ್ವಾಮ್ಯದ ಸಂಸ್ಥೆಗಳಿಂದ ಬಂಡವಾಳ ಹಿಂತೆಗೆತದ ಸಕರ್ಾರದ ಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಐದು ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಂದ ಬಂಡವಾಳ ಹಿಂತೆಗೆತಕ್ಕೆ ಬುಧವಾರ ಕೇಂದ್ರ ಸಚಿವ ಸಂಪುಟ ನಿಧರ್ಾರ ಕೈಗೊಂಡಿತ್ತು