ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವುದೇ ಎನ್ಎಸ್ಎಸ್: ಸಜ್ಜಾದೆ

ಲೋಕದರ್ಶನ ವರದಿ

ವಿಜಯಪುರ 02:ರಾಷ್ಟ್ರೀಯ ಸೇವಾ ಯೋಜನೆಯು ಸದೃಢ ಸಮಾಜ ನಿಮರ್ಾಣಕ್ಕೆ ಯುವಕರನ್ನು ಸನ್ನದುಗೊಳಿಸುವ ತರಬೇತಿ ಕೇಂದ್ರವಿದ್ದಂತೆ. ಒಂದು ಬಾರಿ ಈ ಕ್ಷೇತ್ರದ ಪರಿಮಿತಿಗೆ ಒಳಪಟ್ಟರೆ ಸಾಕು ಯುವಕರು ಸ್ವಯಂ ಪರಿವತರ್ಿತರಾಗುವ ಮೂಲಕ ಸುಂದರ ಸಮಾಜ ಕಟ್ಟಲು ಮುಂದಾಗುತ್ತಾರೆ. ಹಾಗೂ ದೇಶ ಕಟ್ಟುವ ಕಾರ್ಯವನ್ನು ಮಾಡುವ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ತತ್ವವನ್ನು ಎತ್ತಿ ಹಿಡಿಯುತ್ತಾರೆ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಜಯಪುರ ಜಿಲ್ಲಾ ಎನ್.ಎಸ್.ಎಸ್ ನೋಡಲ್ ಅಧಿಕಾರಿ ಹೆಚ್.ಎಂ.ಸಜ್ಜಾದೆ ಹೇಳಿದರು. 

ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ, ಬಿಸಿಎ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾಷರ್ಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು ಆಧುನಿಕ ಯುಗದಲ್ಲಿಂದು ಯುವಕರಲ್ಲಿ ಸೇವಾ ಮನೋಭಾವನೆಯು ಕಡಿಮೆಯಾಗುತ್ತಿರುವುದು ರಾಷ್ಟ್ರಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದನ್ನು ಮನಗಂಡು ಸೃಷ್ಠಿಯಾದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವು ಯುವಕರಲ್ಲಿ ಸೇವಾ ಮನೋಭಾವನೆಯನ್ನು ಮೂಡಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಮಾಜದಲ್ಲಿ ಬದುಕುವ ನಾವುಗಳು ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಎಲ್ಲರಲ್ಲಿಯೂ ಅರಿವು ಮೂಡಿಸುವ ಮೂಲಕ ಬದುಕು ಹಾಗೂ ಬದುಕಲು ಬಿಡು ಎನ್ನುವ ಸಂದೇಶವನ್ನು ಸಾರ್ಥಕ ಮಾಡಿಕೊಳ್ಳಬೇಕು. ಈ ಎಲ್ಲ ಕಾರ್ಯವನ್ನು ಮಾಡುವಲ್ಲಿ ಎನ್ಎಸ್ಎಸ್ ಸಹಾಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಆರ್.ಜಿ. ಮಂಗಲಗಿ ಇಂದು ಯುವಕರು ದುಶ್ಚಟಗಳ ದಾಸರಾಗಿ ಬದುಕನ್ನು ಅರ್ಧಕ್ಕೆ ಅಳಿಸಿ ಹಾಕಿಕೊಳ್ಳುತ್ತಿದ್ದಾರೆ ಅಂಥವರಿಗೆ ಸತ್ಯ ಮಾರ್ಗ ತೋರುವ ಕಾರ್ಯವನ್ನು ಇಂತ ಶಿಬಿರಗಳು ಮಾಡುತ್ತವೆ. ಆ ನಿಟ್ಟಿನಲ್ಲಿ ಶಿಬಿರಾಥರ್ಿಗಳು ಸಂಯಮ, ಶಿಸ್ತು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕಲಿಯುವ ಮನಸ್ಸಿದ್ದರೆ ಪ್ರತಿಯೊಂದು ವಸ್ತುವು ಸಹ ನಮಗೆ ಒಂದೊಂದು ಪಾಠವನ್ನು ಕಲಿಸುತ್ತವೆ. ಆದರೆ ಅದನ್ನು ಸೂಕ್ಷ್ಮವಾಗಿ ಅವಲೋಕಿಸುವ ಗುಣವನ್ನು ರುಡಿಸಿಕೊಳ್ಳುವುದು ಅತೀ ಮುಖ್ಯವಾದುದು. ಆ ನಿಟ್ಟಿನಲ್ಲಿ ಇಂಥ ಶಿಬಿರಗಳ ಮೂಲಕ ಜಾಗೃತಿ ಮೂಡಿಸಿ ನೈರ್ಮಲಿಕರಣ ಹಾಗೂ ಶುದ್ಧ ಗಾಳಿ, ಸ್ವಸ್ಥ ಆಹಾರ ದೊರಕುವಂತೆ ಮಾಡಬೇಕು ಎಂದು ಕರೆ ನೀಡಿದರು.

ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ವಿದ್ಯಾವರ್ಧಕ ಸಂಘ ಸಂಯೋಜಕರಾದ ಡಾ.ವಿ.ಬಿ.ಗ್ರಾಮಪುರೋಹಿತ ಹಾಗೂ ಪ್ರಾಚಾರ್ಯ ಜಿ.ಹೆಚ್.ಮಣ್ಣೂರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಡಿ.ಎನ್.ದರಬಾರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಿ.ವಿ.ಚೌಧರಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಘಟಕಾಧಿಕಾರಿಗಳಾದ ರಾಜು ಕಪಾಳಿ ಸ್ವಾಗತಿಸಿದರು. ಮನೋಹರ ದೊಡ್ಡಮನಿ ನಿರೂಪಿಸಿದರು ಸೀಮಾ ಪಾಟೀಲ, ವಂದಿಸಿದರು. ಎಲ್ಲ ಉಪನ್ಯಾಸಕ ಮಂಡಳಿಯು ಕಾರ್ಯಕ್ರಮದಲ್ಲಿ ಭಾಗವಹಸಿದ್ದರು.