ಸಿದ್ದರಾಮಯ್ಯ ಹೇಳುವುದೆಲ್ಲ ಉಲ್ಟಾ ಆಗುತ್ತದೆ: ಸಚಿವ ಈಶ್ವರಪ್ಪ

ಲೋಕದರ್ಶನ ವರದಿ

ಕೊಪ್ಪಳ 26: ಉಪ ಚುನಾವಣೆಯ ನಂತರ ಬಿಎಸ್ವೈ ಸರಕಾರ ಬೀಳುತ್ತೆ  ಎಂದು ಸಿದ್ದರಾಮಯ್ಯ ಹೇಳುತ್ತಾರೆ ಆದರೆ ಸಿದ್ದರಾಮಯ್ಯ ಯಾವಾಗಲೂ ಏನ್ ಹೇಳ್ತಾರೋ ಅದು ಉಲ್ಟಾ ಆಗುತ್ತದೆ. ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಾಟರ್ಿ ಪೂರ್ಣ ಬಹುಮತ ಬರೋ ಸೀಟು ಗೆದ್ರೆ ಸಿದ್ದರಾಮಯ್ಯ  ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಸವಾಲ್ ಎಸೆದರು.

ಅವರು ತಾಲೂಕಿನ ಮುನಿರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಹಾರಾಷ್ಟ್ರ ರಾಜಕೀಯ ವಿಚಾರ ಅತಂತ್ರ ಪರಿಸ್ಥಿತಿ ಬಂದಾಗ ಇದು ಸಾಮಾನ್ಯ,ಬಿಜೆಪಿ- ಶಿವಸೇನೆ ಚುನಾವಣೆ ಪೂರ್ವ ಮೈತ್ರಿ ಇತ್ತು, ಆದ್ರೆ ಚುನಾವಣೆ ಬಳಿಕ ಅದು ಕಾಂಗ್ರೆಸ್ ಎನ್.ಸಿ.ಪಿ.ಜೊತೆ ಹೋಯ್ತು ಅಧಿಕಾರಕ್ಕಾಗಿ ಕಾಂಗ್ರೆಸ್ ಎನ್.ಸಿ.ಪಿ.ಜೊತೆ ಹೋಯ್ತು ಹಿಂದೂ ಪಕ್ಷ ಶಿವಸೇನೆ ಜೊತೆ ಕಾಂಗ್ರೆಸ್ ಹೋಗ್ತಿದೆ ಅಧಿಕಾರದ ಲಾಲಸೆಗಾಗಿ ಶಿವಸೇನೆ ಕೈ ಜೋಡಸ್ತಿದೆ ಇದನ್ನ ಮುಸ್ಲಿಂರು ಅರ್ಥ ಮಾಡಿಕೊಳ್ಳಬೇಕು ಎನ್.ಸಿ.ಪಿ.ನಮ್ಮ ಜೊತೆ ಬರ್ತಿನಿ ಅಂದ್ರು,ಅದಕ್ಕಾಗಿ ನಾವು ಹೋಗಿದ್ವಿ ಇದೀಗ ಬರಲ್ಲ ಅಂತೀದಾರೆ,ನಮಗೆ ಮುಖಭಂಗ ಅಲ್ಲ ಎಂದ  ಅವರು ಭಾರತೀಯ ಜನತಾ ಪಾರ್ಟ 15 ಕ್ಷೇತ್ರದಲ್ಲಿ ಗೆಲ್ತೀವಿ 15 ಕ್ಕೆ 15  ಗೆಲ್ಲೋ ಪ್ರಯತ್ನ ಮಾಡ್ತೀವಿ ಕೆಲವು ಕ್ಷೇತ್ರದಲ್ಲಿ ಗೊಂದಲವಿದೆ ಎಂಬ ಪ್ರಶ್ನೆಗೆ ಸಚಿವರು ರಾಜಕಾರಣವೇ ಗೊಂದಲ,ಕೆಲವು ಕಡೆ ಗೊಂದಲ ಇದೆ ಸರಿ ಮಾಡಕೊಳ್ತೀವಿ ಅನರ್ಹರು ನಮ್ಮನ್ನ ನಂಬಿ ಬಂದಿದಾರೆ ಎಂದ ಈಶ್ವರಪ್ಪ ನಮಗೆ ಪೂರ್ಣ ಬಹುಮತ ಬಂದು ಜೆ.ಡಿ.ಎಸ್ ಸಪೋರ್ಟ ಮಾಡ್ತೀವಿ ಅಂದ್ರೆ ಬೇಡಾ ಅನ್ನಲ್ಲ ಕಾಂಗ್ರೆಸ್ ಬಿಟ್ಟು ಬೇರೆ ಯಾವ ಪಕ್ಷ ಬಂದ್ರೂ ನಾವು ಬೇಡಾ ಅನ್ನಲ್ಲ  ಈ ಬಾರಿ ಅನರ್ಹರ ಶಾಸಕರನ್ನು ಸೋಲಿಸುವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರ ಕುಮಾರಸ್ವಾಮಿ ಅಪ್ಪ ಮಕ್ಕಳನ್ನೆ ಗೆಲ್ಲಿಸಲಾಗಿಲ್ಲ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಸಿ.ವಿ.ಚಂದ್ರಶೇಖರ, ತಾಲೂಕಾ ಪಂಚಾಯತ್ ಸದಸ್ಯ ಫಾಲಾಕ್ಷಪ್ಪ ಗುಂಗಾಡಿ, ಮುಖಂಡರಾದ ಮಂಜುನಾಥ ಹಳ್ಳಿಕೇರಿ, ಹಾಲೇಶ ಕಂದಾರಿ, ದೇವರಾಜ್ ಹಾಲಸಮುದ್ರ ಉಪಸ್ಥಿತರಿದ್ದರು.