ಅಥಣಿ 28: (ಶಿವಪುತ್ರ ಯಾದವಾಡ) ಬೆಳಗಾವಿ ಜಿಲ್ಲೆಯಲ್ಲಿನ ಎಲ್ಲ ಸಕ್ಕರೆ ಕಾಖರ್ಾನೆಗಳು ಎಫ ಆರ್ ಪಿ ಪ್ರಕಾರ ಪತ್ರಿ ಟನ್ ಕಬ್ಬಿಗೆ 2700 ರೂ ನೀಡಬೇಕು. ಈಗಾಗಲೆ ಕಾಗವಾಡದ ಶಿರಗುಪ್ಪಿ ಶುಗರ ಕಾಖರ್ಾನೆ ಪ್ರಸಕ್ತ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಕೇಂದ್ರ ಸಕರ್ಾರ ನಿಗದಿಪಡಿಸಿರುವ ಎಫ್ ಆರ ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 2700 ರೂ ನೀಡಿರುವುದನ್ನು ಪ್ರಸ್ತಾಪಿಸಿ, ಉಗಾರ ಕಬ್ಬು ಬೆಳೆಗಾರರ ಸಂಘ ಸ್ವಾಗತಿಸುತ್ತದೆ. ಎಂದು ಉಗಾರ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮೋಹನರಾವ್ ಶಹಾ ಹೇಳಿ ಒತ್ತಾಯಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಾ, ಇತ್ತಿಚಿನ ಭಿಕರ ಪ್ರವಾಹ ಬಂದು ನದಿ ತೀರದ ಜನರ ಬದುಕು ಸಂಕಷ್ಟಕ್ಕಿಡಾಗಿದೆ. ಪ್ರವಾಹದಿಂದ ಅಪಾರ ಪ್ರಮಾಣದ ಕಬ್ಬು ನಾಶವಾಗಿದೆ. ಈಗ ಅಳಿದುಳಿದ ಕಬ್ಬನ್ನು ರೈತರು ಕಾಖರ್ಾನೆಯವರು ಎಲ್ಲ ಕಬ್ಬನ್ನು ನುರಿಸುವದರ ಜೊತೆಗೆ ಪ್ರತಿ ಟನ್ ಕಬ್ಬಿಗೆ 2700 ರೂ ನೀಡುವಂತೆ ಆಗ್ರಹಿಸಿದ್ದಾರೆ.