ವಾರ್ಷಿಕ್ ಪರೀಕ್ಷೆ 1ರ ಸಕಲಸಿದ್ಧತೆ ಪೊರ್ಣಗೊಂಡಿದೆ
ಹುಕೇರಿ, 19; ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತಿರುವ 2024 ಹಾಗೂ 25ನೇ ಸಾಲಿನಲ್ಲಿ ನಡೆಯುತ್ತಿರುವ ವಾರ್ಷಿಕ್ ಪರೀಕ್ಷೆ 1ರ ಸಕಲಸಿದ್ಧತೆಯನ್ನು ಮಾಡಿಕೊಂಡಿರುತ್ತೇವೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಭಾವತಿ ಪಾಟೀಲ್ ನಮ್ಮ ತಾಲೂಕ್ ಕೇಂದ್ರದಲ್ಲಿ ಈಗ 20 ಕೇಂದ್ರಗಳು ಇರುತ್ತದೆ ಹಾಗೂ ಎಂಟು ಮಾರ್ಗಗಳು ಇರುತ್ತದೆ ಆ ಎಂಟು ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಪೂರೈಕೆ ಮಾಡಲಾಗುವುದು. ವಾಹನ ಸೌಕರ್ಯ ಮಾನ್ಯ ತಶಿಲ್ದಾರರು ಮಂಜುಳಾ ನಾಯಕ್ ಇವರು ಒದಗಿಸಿ ಕೊಟ್ಟಿರುತ್ತಾರೆ. ಕಡ್ಡಾಯವಾಗಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ ಕೇಂದ್ರದ ಚೀಪ್ ಅವರ ಹತ್ತಿರ ಮಾತ್ರ ಮೊಬೈಲ್ ಇರುತ್ತದೆ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು. ಪೋಲೀಸ ಇಲಾಖೆ ಪತ್ರದ ಮೂಲಕ ತಿಳಿಸುತ್ತೇವೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪರೀಕ್ಷೆ ಕೇಂದ್ರದಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಕಾಳಜಿ ಯಿಂದ ಆರೋಗ್ಯ ಇಲಾಖೆಯಿಂದ ತಲಾ ಕೇಂದ್ರಕ್ಕೆ ಒಬ್ಬರು ನೇಮಕ ಹಾಗೂ ಆಶಾ ಕಾರ್ಯಕರ್ತರು ಹಾಗೂ ನಾಲ್ಕು. ಐದು ಕೇಂದ್ರಕ್ಕೆ ಒಂದು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಕೇಂದ್ರದ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಡವಳಿಕೆ ಇರುತ್ತದೆ ಹಳ್ಳಿಯಿಂದ ಬರುವಂತ ವಿದ್ಯಾರ್ಥಿನಿಯರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಆಯಾ ಹಳ್ಳಿ ಗಳಿಗೆ ವಾಹನ ವ್ಯವಸ್ಥೆ ಬೆಳಿಗ್ಗೆ 9:00ಗೆ ಪರೀಕ್ಷೆ ಕೇಂದ್ರಗಳಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಹಾಗೂ ಮಧ್ಯಾಹ್ನ ಮರಳಿ ಹಳ್ಳಿಗಳಿಗೆ ಹೋಗಲಿಕ್ಕೆ ಬಸ್ಸಿನ ಸೌಕರ್ಯ ಒದಗಿಸಿ ಕೊಡಲಾಗುವುದು ಕೆಎಸ್‌ಆರ್ಟಿಸಿ ಸಿಬ್ಬಂದಿ ಇವರು ನಮಗೆ ಸಾಕಷ್ಟು ಸಹಕಾರ ಮಾಡಿದ್ದಾರೆ ಅವರಿಗೆ ಧನ್ಯವಾದಗಳು ತಿಳಿಸಿದರು.
ನಮ್ಮಲ್ಲಿ ವಿದ್ಯಾರ್ಥಿಗಳು 6888 ಹಾಗೂ ಹಿಂದಿನ ವರ್ಷದ ವಿದ್ಯಾರ್ಥಿಗಳು ಸೇರಿ 7439 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕೆ ಸಹಕರಿಸಿದ ಪಾಲಕ ಪೋಷಕರು ಎಸ್ ಟಿ ಎಂ ಸಿ ಅಧ್ಯಕ್ಷರು ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಯನ್ನು ಶ್ರೀಮತಿ ಪ್ರಭಾವತಿ ಪಾಟೀಲ್ ಸಲ್ಲಿಸುತ್ತೇನೆ ಎಂದು ಹೇಳಿದರು ಹಾಗೂ ಮುದ್ದು ವಿದ್ಯಾರ್ಥಿಯರಿಗೆ ಕಿವಿ ಮಾತಂದು ಭಯ ಮುಕ್ತರಾಗಿ ಪರೀಕ್ಷೆ ಬರೆಯಿರಿ ಎಂದು ಶುಭ ಹಾರೈಸಿದರು.