ನಶಿಸುತ್ತಿರುವ ಐತಿಹಾಸಿಕ ಸ್ಮಾರಕ ರಕ್ಷಿಸುವಲ್ಲಿ ನಾವೆಲ್ಲಾ ಬದ್ಧರಾಗಬೇಕು

ಲೋಕದರ್ಶನ ವರದಿ 

ಕೊಪ್ಪಳ 01: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಪುರಾತತ್ವ ಸಂಗ್ರಹಾಲಯಗಳು, ಪರಂಪರಾ ಇಲಾಖೆ ಕಮಲಾಪುರ ಹಂಪಿ ಹಾಗೂ  ಸರಕಾರಿ ಪ್ರಥಮದರ್ಜೆ  ಕಾಲೇಜಿನ ಪರಂಪರೆ ಕೂಟದ ಸಹಯೋಗದಲ್ಲಿ ಸ್ಮಾರಕಗಳ ಸ್ವಚ್ಛತೆ ಹಾಗೂ ಪರಂಪರೆ ಕೂಟದ ಉದ್ಘಾಟನೆಯ ಕಾರ್ಯಕ್ರಮ ಜರುಗಿತು. 

ಅತಿಥಿಗಳಾಗಿ ಪುರಾತತ್ವ ಸಹಾಯಕರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಂಗ್ರಹಾಲಯದ  ಸಹಾಯಕ ಅಧಿಕಾರಿಗಳು ಕಮಲಾಪುರ ಆದ  ಡಾ ಆರ್. ಮಂಜನಾಯ್ಕ ದೀಪ ಬೆಳಗಿಸುವದರ ಮೂಲಕ ನಶಿಸುತ್ತಿರುವ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವಲ್ಲಿ ನಾವೆಲ್ಲಾ ಬದ್ಧರಾಗಬೇಕಿದೆ. ಈ ಮೂಲಕ ಪ್ರಾಚೀನ ಐತಿಹಾಸಿಕತೆಯ ಕುರುಹುಗಳನ್ನು ಇಂದಿನ ಜನತೆಗೆ ತೋರ್ಪಡಿಸಬೇಕು ಅಂದಾಗ ಜನರಲ್ಲಿ ಇತಿಹಾಸದ ಅರಿವು ಮೂಡ ಬಲ್ಲದೆಂದರು.  

ಅಧ್ಯಕ್ಷತೆ ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಮಾತನಾಡಿ ನಮ್ಮ ಐತಿಹಾಸಿಕ ಪರಂಪರೆಯನ್ನು ಉಳಿಸಿ ಅದನ್ನು ಮುಂದಿನ ಜನಾಂಗಕ್ಕೆ ವರ್ಗಾಹಿಸುವ ಗುರುತರ ಜವಾಬ್ದಾರಿ ವಿದ್ಯಾಥರ್ಿಗಳ ಮೇಲಿದೆ ಅದನ್ನು ಸರಿಯಾಗಿ ನಿರ್ವಹಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಪರಂಪರಾಕೂಟದ ಸಂಚಾಲಕರು ಆದ ಶುಭಾ ಎಸ್, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಮಾರುತೇಶ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಗಾಯಿತ್ರಿ ಭಾವಿಕಟ್ಟಿ , ಉಪನ್ಯಾಸಕ ಹನುಮಗೌಡ ಉಪಸ್ಥಿತರಿದ್ದರು. ಪ್ರಾಸ್ತಾವಿಕ  ಉಪನ್ಯಾಸಕರದ ಶರಣಪ್ಪ ತಳವಾರ, ಸ್ವಾಗತ ಉಪನ್ಯಾಸಕ ಮಲ್ಲೇಶಪ್ಪ ಉಳ್ಳಾಗಡ್ಡಿ,  ನಿರೂಪಣೆ ಉಪನ್ಯಾಸಕ ಜ್ಞಾನೇಶ ಪತ್ತಾರ, ವಂದನಾರ್ಪಣೆ ಗೋಣಿಬಸಪ್ಪ ಎಚ್ ನೆರವೇರಿಸಿದರು.