ಲೋಕದರ್ಶನ ವರದಿ
ಕೊಪ್ಪಳ 03: ಯಾವುದೇ ಸಮಾಜ ಸಮಗ್ರ ಅಭಿವೃದ್ಧಿ ಹೊಂದಲು ಸಂಘಟಿತರಾಗಿರುವದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಾಗ ಆ ಸಮಾಜ ಬೆಳವಣಿಗೆ ಹೊಂದುತ್ತದೆ, ಸಮಾಜದ ಸಂಘಟನೆ ಬೆಳೆಸುವುದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು, ಏಕೆಂದರೆ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ ಎಂದು ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಹೇಳಿದರು.
ಅವರು ಇತ್ತೀಚೆಗೆ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ ಕರ್ನಾಟಕ ಸರಕಾರಿ ಮುಸ್ಲಿಮ್ ನೌಕರರ ಕ್ಷೇಮಾಭಿವೃದ್ಧಿ ಜಿಲ್ಲಾ ಸಂಘದ ವತಿಯಿಂದ ಸಮಾಜದ ಪ್ರತಿಭಾವಂತ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಬಹುಮಾನ ವಿತರಣಾ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿಭೆಗಳಿಗೆ ಸಮಾಜದ ಪ್ರೋತ್ಸಾಹ ಅಗತ್ಯವಾಗಿದೆ ಮತ್ತು ಅವರ ಪ್ರತಿಭೆ ಹೊರಹೊಮ್ಮಲು ವೇದಿಕೆಗಳು ಅತ್ಯಂತ ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮುಸ್ಲಿಮ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಬದಿಯುದ್ದಿನ್ ನವೀದ್ ರವರು ಮಾತನಾಡಿ ಮುಸ್ಲಿಮ್ ನೌಕರ ಕ್ಷೇಮಾಭಿವೃದ್ಧಿ ಸಂಘದ ಅಭಿವೃದ್ಧಿ ಜೊತೆಗೆ ಸಮಾಜದ ಸಮಗ್ರ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡುವ ಶಿಕ್ಷಕ ಮತ್ತು ಪಾಲಕ ವೃಂದಕ್ಕೆ ಪ್ರೋತ್ಸಾಹದಾಯಕವಂತಹ ಕಾರ್ಯಕ್ರಮ ನಮ್ಮ ಸಂಘದಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಖಜನಾಧಿಕಾರಿ ಮಹೆಬೂಬ್ಬೀ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಸಮಾಜದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಮುಸ್ಲಿಮ್ ನೌಕರರ ಸಂಘ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು. ಹಿರಿಯ ನ್ಯಾಯವಾದಿ ಎ.ಎ.ಚೌತಾಯಿ ಮಾತನಾಡಿ, ಸಮಾಜದ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತ ಹೋರಾಟ ಮಾಡಬೇಕಾಗುತ್ತದೆ ಎಂದರು.
ಉರ್ದು ಸಂಪನ್ಮೂಲ ವ್ಯಕ್ತಿ ಫರಹತ್ಜಹಾನ್ ಬೇಗಂ ಕುಂದಗೋಳರವರು ವಿಶೇಷ ಉಪನ್ಯಾಸ ನೀಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದೆ. ವಿದ್ಯಾಥರ್ಿಗಳ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರಷ್ಟೇ ಪಾಲಕರ ಜವಾಬ್ದಾರಿ ಇದೆ ಎಂದರು. ನಂತರ ನಿವೃತ್ತ ತಹಸೀಲ್ದಾರ್ ಲಾಯಕ್ ಅಲಿ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಖಾಜಾ ಮೈನುದ್ದೀನ್ರವರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ವಿಶೇಷ ತರಬೇತಿ ನೀಡಿದರು.
ವೇದಿಕೆ ಮೇಲೆ ನೌಕರರ ಸಂಘದ ಜಿಲ್ಲಾ ಕೋಶಾಧ್ಯಕ್ಷ ಸುಶಿಲೇಂದ್ರರಾವ್ ದೇಶಪಾಂಡೆ, ತರಬೇತುದಾರ ಅಮೀನ್ ಅತ್ತಾರ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ನಾಸೀರುದ್ದೀನ್ ಹುಸೇನಿ, ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ, ಜಿಲ್ಲಾ ಕಾರ್ಯದರ್ಶಿ ನಜೀರ್ ಅಹ್ಮದ್, ಶಿಕ್ಷಕ ಖಾಸೀಮ್ಸಾಬ್ ಸಂಕನೂರು, ಜಿಲ್ಲಾ ಖಜಾಂಚಿ ಎಸ್.ಆಸೀಫ್ ಮಂಡಲಗೇರಿ, ಸಂಘದ ಗೌರವಾಧ್ಯಕ್ಷ ರಾಜಾಭಕ್ಷಿ ಕರಮುಡಿ, ಜೆಸ್ಕಾಂ ಇಲಾಖೆಯ ಲೆಕ್ಕವಿಭಾಗದ ಸಾದಿಕ್ಹುಸೇನ್, ಸಂಘದ ಗೌರವಾಧ್ಯಕ್ಷ ಸಿ.ಎಂ. ಮುಸ್ತಫಾ, ರಾಜ್ಯ ಪರಿಷತ್ ಸದಸ್ಯ ನಜೀರ್ ಅಹ್ಮದ್, ಅಬಕಾರಿ ಇಲಾಖೆಯ ಇಸ್ಮಾಯಿಲ್ಸಾಬ್, ಜೆಸ್ಕಾಂ ಇಲಾಖೆಯ ಖಲೀಮುದ್ದೀನ್, ಶಕೀಲ್ಅಹ್ಮದ್, ಜಿ.ಪಂ.ಇಲಾಖೆಯ ಹುಸೇನ್ಸಾಬ್ ಕಾಯಿಗಡ್ಡಿ, ಶಿಕ್ಷಕ ಮಹೆಬೂಬ್ಅಲಿ ಮಂಗಳಾಪುರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.