ಮಹಿಳಾ ಸ್ವಸಹಾಯ ಸಂಘಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು: ಪಾಟೀಲ

All facilities will be provided to Women Self Help Societies: Patil

ಮಹಿಳಾ ಸ್ವಸಹಾಯ ಸಂಘಗಳಿಗೆ ನೋಂದಣಿ ಪ್ರಮಾಣ ಪತ್ರಗಳ ವಿತರಣೆ 

ವಿಜಯಪುರ, ಜ. 16: ಮಹಿಳಾ ಸ್ವಸಹಾಯ ಸಂಘಗಳಿಗೆ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. 

ಇಂದು ಗುರುವಾರ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ 23 ನಾನಾ ಮಹಿಳಾ ಸ್ವಸಹಾಯ ಸಂಘಗಳಿಗೆ ನೋಂದಣಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. 

ಸಚಿವ ಎಂ. ಬಿ. ಪಾಟೀಲ ಅವರು ಮಹಿಳಾ ಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ.  ಮಹಿಳಾ ಸ್ವಸಹಾಯ ಸಂಘಗಳ ಉಚಿತ ನೋಂದಣಿಗೆ ನೆರವು ನೀಡಲಾಗಿದೆ.  ಅಲ್ಲದೇ, ಬಬಲೇಶ್ವರ ಮತಕ್ಷೇತ್ರದ 210 ಮಹಿಳಾ ಸ್ವಸಹಾಯ ಸಂಘಗಗಳಿಗೆ ಹೈನುಗಾರಿಕೆ, ಕುರಿಸಾಕಣೆ ಸೇರಿದಂತೆ ಮಹಿಳೆಯರು ಗೃಹ ಉದ್ಯೋಗ ಕೈಗೊಳ್ಳಲು ಸರಕಾರದ ಯೋಜನೆಗಳನ್ನು ಒದಗಿಸಲು ಈಗಗಾಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ಸೂಚನೆ ನೀಡಲಾಗಿದೆ.  ಮುಂಬರುವ ದಿನಗಳಲ್ಲಿ ಮಹಿಳೆಯ ಸಬಲೀಕರಣ ಮತ್ತು ಸ್ವಾವಂಲಬನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ತಿಕೋಟಾ, ಬರಟಗಿ, ಯತ್ನಾಳ, ಯಕ್ಕುಂಡಿ, ಶೇಗುಣಸಿ, ಕಾತ್ರಾಳ, ಕರಾಡದೊಡ್ಡಿ ಸೇರಿದಂತೆ ನಾನಾ ಗ್ರಾಮಗಳ 23 ಸ್ವಸಹಾಯ ಸಂಘಗಳಿಗೆ ನೋಂದಣಿ ಪ್ರಮಾಣ ಪತ್ರವನ್ನು ಸುನೀಲಗೌಡ ಪಾಟೀಲ ವಿತರಿಸಿದರು. 

ಈ ಸಂದರ್ಭದಲ್ಲಿ ಎಂ. ಸಿ. ತಳವಾರ, ಸಂಗಮೇಶ ಕೋಲಕಾರ, ನಾನಾ ಮಹಿಳಾ ಸ್ವಸಹಾಯ ಸಂಘಗಳ ಅಧ್ಯಕ್ಷರು, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.