ಹಾವೇರಿ27: ಹಡಪದ ಸಮಾಜದವರು ರಾಜಕೀಯವಾಗಿ, ಸಾಮಾಜಿಕವಾಗಿ, ಆಥರ್ಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದು, ತಾವು ವಿದ್ಯಾವಂತರಾದರೆ ಮುಂದಿನ ದಿನಗಳದಲ್ಲಿ ಬದಲಾವಣೆ ಸಾಧ್ಯ ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಿಜಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಂತ ಮನೆ ಹಾಗೂ ನಿವೇಶನ ಇಲ್ಲದವರಿಗೆ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳಾದ ಮೋದಿಯವರು ಮುಂದೆ ಬಂದಿದ್ದು, ಸ್ವಂತ ಮನೆ ಹಾಗೂ ನಿವೇಶನವಿಲ್ಲದ ಹಡಪದ ಸಮಾಜದ ಬಾಂಧವರು ಗ್ರಾಮ ಪಂಚಾಯತಿಗಳಲ್ಲಿ ತಮ್ಮ ಆಧಾರ್ ಕಾರ್ಡ ಹಾಗೂ ಮತದಾನ ಗುರುತಿನ ಚೀಟಿಯನ್ನು ನೀಡಿ ಹೆಸರು ನೋಂದಾಯಿಸಬೇಕು. ಅರ್ಹರಿಗೆ ಮುಂದಿನದಿನಗಳಲ್ಲಿ ಮನೆ ಹಾಗೂ ನಿವೇಶ ಮಂಜೂರಿ ಮಾಡಿಸಲಾಗುವುದು ಎಂದು ಹೇಳಿದರು.
ಸಾಲ ಸೌಲಭ್ಯ ಸೇರಿದಂತೆ ಸಕರ್ಾರದ ವಿವಿಧ ಯೋಜನೆಗಳ ಪ್ರಯೋಜನೆ ಪಡೆಯಲು ಆನ್ಲೈನ್ ಮೂಲಕ ಅಜರ್ಿ ಕರೆಯಲಾಗುತ್ತಿದೆ. ಆನ್ಲೈನ್ ಅಜರ್ಿ ಕರೆಯುತ್ತಿರುವ ಕಾರಣ ಕೊನೆಯ ದಿನಾಂಕದೊಳಗಾಗಿ ಅಜರ್ಿ ಸಲ್ಲಿಸಿ ಸಕರ್ಾರದ ಸೌಲಭ್ಯಗಳನ್ನು ಪಡೆಯಲು ಸಮಾಜ ಬಾಂಧವರು ಮುಂದೆಬರಬೇಕು ಎಂದು ತಿಳಿಸಿದರು.
ನಮ್ಮ ಹಿಂದಿನ ಅಧಿಕಾರದ ಅವಧಿಯಲ್ಲಿ ಹಡಪದ ಸಮಾಜದವರಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 6 ಗುಂಟೆ 13 ಆಣೆ ಜಾಗೆ ಮಂಜೂರು ಮಾಡಲಾಗಿದೆ ಹಾಗೂ ಶಾಸಕರ ಅನುದಾನದಿಂದ ರೂ.2 ಲಕ್ಷ ಅನುದಾನ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಕರ್ಾರದಿಂದ ಅನುದಾನ ಬಂದಿಲ್ಲ ಅನುದಾನ ಬಿಡುಗಡೆಯಾದ ತಕ್ಷಣ ತಮಗೆ ಸಹಾಯ ಮಾಡಲಾಗುವುದು. ತಮ್ಮ ಸಮಾಜದವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಉಪನ್ಯಾಸಕರಾಗಿ ಭಾಗವಹಿಸಿದ ಸಾಹಿತಿ ಹನುಮಂತಗೌಡ ಗೊಲ್ಲರ ಅವರು ಮಾತನಾಡಿ, ದಾರ್ಶನಿಕರು ಜಾತಿ ಸ್ವರೂಪರಲ್ಲ, ಜ್ಯೋತಿ ಸ್ವರೂಪರು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. 12ನೇ ಶತಮಾನದಲ್ಲಿ ಬಸವಣ್ಣನವರ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ್ದಾರೆ. ಅಂತಹ ಬಸವಣ್ಣನವರೊಂದಿಗೆ ಕೊನೆಯ ತನಕ ಅವರೊಂದಿಗಿದ್ದವರು ಹಾಗೂ ಬಸವಣ್ಣನವರಿಗೆ ಪ್ರಿಯರಾದವರು ಹಡದಪ ಅಪ್ಪಣ್ಣ ಎಂದು ತಿಳಿಸಿದರು.
ವೃತ್ತಿಯಲ್ಲಿ ಕ್ಷೌರಿಕರಾದ ಹಡಪದ ಅಪ್ಪಣ್ಣ ಅವರು 251 ಅರ್ಥಗಭರ್ಿತ ವಚನಗಳನ್ನು ಬರೆದಿದ್ದಾರೆ. ಹಡಪದ ಅಪ್ಪಣ್ಣನವರ ವಿಚಾರಧಾರೆ, ಸಿದ್ಧಾಂತಗಳು ಸಮಾಜಕ್ಕೆ ಮಾದರಿಯಾಗಿವೆ. ಸಮಾಜಬಾಂಧವರು ಜಾಗೃತರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ದುಶ್ಚಟಗಳಿಂದ ದೂರ ಉಳಿದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ವಿದ್ಯಾವಂತರಾಗಿ ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಹೇಳಿದರು.
ಹಡಪದ ಅಪ್ಪಣ್ಣ ಸಮಾದ ಸೇವಾ ಸಂಘದ ಜಿಲ್ಲಾಧ್ಯಕ್ಷ ಗುಡ್ಡಪ್ಪ ಮಲ್ಲೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸಮಠದ ಬಸವ ಶಾಂತಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಪಾರ್ವತೆಮ್ಮ ಹಲಗಣ್ಣನವರ, ತಹಶೀಲ್ದಾರ ಜಗದೀಶ ಮಜ್ಜಗಿ, ಸಮಾಜದ ಮುಖಂಡರಾದ ಗುಡ್ಡಪ್ಪ ಮಲ್ಲೂರ, ಜಯಣ್ಣ ಶೆಟ್ಟರೆ, ಚನಬಸಪ್ಪ ಹಡಪದ, ಈರಪ್ಪ, ಬಾಬಣ್ಣ ಕ್ಯಾಲಕೊಂಡ ಬಸವರಾಜ ಕಾಯಕದ, ಶಿವಯೋಗೆಪ್ಪ ದೇವಗಿರಿ, ಬಸವರಾಜ ಹಡಪದ, ಮುತ್ತರಾಜ, ಬಸವರಾಜ ದೊಡ್ಡಮನಿ, ಮಲ್ಲಿಕಾಜರ್ುನ ಸಾತೇನಹಳ್ಳಿ, ನಾಗರಾಜ ಬಸೇಗಣ್ಣಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ ಮಲಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಿರೀಶ ತುಪ್ಪದ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಕೀಲರಾದ ನಾಗರಾಜ ಕಾಯಕದ ಸ್ವಾಗತಿಸಿದರು.