ಏಪ್ರಿಲ್ 13ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆ

All Karnataka Brahmin Mahasabha elections on April 13

ಏಪ್ರಿಲ್ 13ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆ

ಕೊಪ್ಪಳ, 7- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಭಾನು ಪ್ರಕಾಶ ಶರ್ಮಾ ಶುಕ್ರವಾರ ಸಮುದಾಯದ ಜನರಲ್ಲಿ ಮತಯಾಚನೆ ಮಾಡಿದರು. ಏಪ್ರಿಲ್ 13ರಂದು ಮತದಾನ ನಡೆಯಲಿದ್ದು, ಭಾನುಪ್ರಕಾಶ ಅವರು ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 1800 ಬ್ರಾಹ್ಮಣ ಸಮಾಜದವರು ಮಹಾಸಭಾದ ಸದಸ್ಯರಾಗಿದ್ದು, ಇದರಲ್ಲಿ 1200 ಜನ ಮತದಾನಕ್ಕೆ ಅರ್ಹರಾಗಿದ್ದಾರೆ.  ‘ಮಹಾಸಭಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಲು ಮೊದಲ ಬಾರಿಗೆ ಪಂಡಿತರಿಗೆ ಅವಕಾಶ ಲಭಿಸಿದೆ. ಮೊದಲು ಐದು ವರ್ಷ ಅಧಿಕಾರದ ಅವಧಿಯಿತ್ತು. ಈ ಬಾರಿಯಿಂದ ಐದು ವರ್ಷಕ್ಕೆ ಏರಿಕೆ ಮಾಡಲಾಗಿದೆ’ ಎಂದು ವಿವರಿಸಿದರು. ಮಹಾಸಭಾದ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಶಿ, ಜಿಲ್ಲಾ ಸಂಚಾಲಕ ಎಚ್‌.ಬಿ. ದೇಶಪಾಂಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಜೋಶಿ, ಸಮಾಜದ ಮುಖಂಡರಾದ ಡಾ. ಕೆ.ಜಿ. ಕುಲಕರ್ಣಿ, ರಾಘವೇಂದ್ರ ನರಗುಂದ, ವೇಣುಗೋಪಾಲ್ ಜಹಗೀರದಾರ್, ಅನಿಲಕುಮಾರ ಕುಲಕರ್ಣಿ, ರಮೇಶ ಜಹಗೀರದಾರ, ಸುನಿಲ್ ಕುಮಾರ ದೇಸಾಯಿ, ಕೃಷ್ಣ ಪದಕಿ, ಸುರೇಶ ಮುಧೋಳ, ವಿಜಯ ಪದಕಿ, ವೀಣಾ ಜಹಗೀರದಾರ್, ಲತಾ ಮುಧೋಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.