ಉಚಿತವಾಗಿ ಜಮೀನು ಮಂಜೂರು ಮಾಡಲು ಅಖಿಲ ಭಾರತ ವೀರಶೈವ ಶಿಗ್ಗಾವಿ ಘಟಕ ಮನವಿ
ಶಿಗ್ಗಾವಿ 19: ಅಖಿಲ ಭಾರತ ವೀರಶೈವ ಮಹಾಸಭೆಗೆ ವಿವಿದೋದ್ದೇಶಗಳಿಗಾಗಿ ಉಚಿತವಾಗಿ ಜಮೀನು ಮಂಜೂರು ಮಾಡುವ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ (ರಿ) ಶಿಗ್ಗಾವಿ ಘಟಕದವರು ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗೆ ಮನವಿ ನೀಡಿದರು. ಮನವಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ (ರಿ.) ವೀರಶೈವ ಲಿಂಗಾಯತ ಸಮುದಾಯವು 120 ವರ್ಷಗಳ ಇತಿಹಾಸ ಹೊಂದಿದೆ. ಮಹಾಸಭೆಯು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಸದಸ್ಯ ಬಲ ಹೊಂದಿರುವ ಸಂಸ್ಥೆಯ ರಾಜ್ಯ ಘಟಕಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯ ಸಮಾಜ ಸಂಘಟನೆಯಲ್ಲಿ ಸಕ್ರಿಯವಾಗಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ "ವೀರಶೈವ ಲಿಂಗಾಯತ ಭವನ" ಮತ್ತು "ವಿದ್ಯಾರ್ಥಿಗಳ ಉಚಿತ ವಸತಿ ನಿಲಯ" ನಿರ್ಮಿಸುವುದು ಮಹಾಸಭೆಯ ಉದ್ದೇಶ.
ಮಹಾಸಭೆಯ ಶಿಗ್ಗಾವಿ ತಾಲೂಕ ಘಟಕವು ತಾಲ್ಲೂಕಿನಲ್ಲಿ "ವೀರಶೈವ ಲಿಂಗಾಯತ ಭವನ" ಮತ್ತು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿ ಬೇಕಾಗುವ "ಉಚಿತ ವಸತಿ ನಿಲಯ, ಆಟದ ಮೈದಾನ, ತರಬೇತಿ ಕೇಂದ್ರ ಇತ್ಯಾದಿಗಳನ್ನು ಸ್ಥಾಪಿಸಲು ಶಿಗ್ಗಾವಿ ಪಟ್ಟಣದ ಸರ್ವೆ ನಂ. 139/16/2 ರಲ್ಲಿನ 9.5 ಗುಂಟೆ ಖಾಲಿ ಜಾಗವನ್ನು "ಅಖಿಲ ಭಾರತ ವೀರಶೈವ ಮಹಾಸಭಾ ಶಿಗ್ಗಾವಿ ತಾಲ್ಲೂಕು ಘಟಕಕ್ಕೆ ಉಚಿತವಾಗಿ ರಿಯಾಯಿತಿ ದರದಲ್ಲಿ ಮಂಜೂರು ಡಾ. ಶಾಮನೂರ ಶಿವಶಂಕರ್ಪ ಶಾಸಕರು ಮಾಡಲು ಕೋರಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಸವರಾಜ ರಾಗಿ, ಸಿದ್ಧಾರ್ಥಗೌಡ ಪಾಟೀಲ, ಡಿ.ಎ.ಗೊಬ್ಬರಗುಂಪ್ಪಿ ಟಿ.ವಿ.ಸುರಗಿಮಠ, ಸಿದ್ದಣ್ಣ ಮೊರಬದ, ಉಮೇಶಗೌಡ ಪಾಟೀಲ, ಶಶಿಧರ ಸುರಗಿಮಠ, ಚಂದ್ರು ಜವಳಿ, ಜಿ.ಎನ್ ಯಲಿಗಾರ, ಎಸ್.ಎನ್ ಮುಗಳಿ, ಮಂಜುನಾಥ ಕರಡಿ, ಶಶಿಧರ ಯಲಿಗಾರ, ಮಂಜುನಾಥ ಮಣ್ಣಣ್ಣನವರ, ಮಾಲತೇಶ ಯಲಿಗಾರ, ಅಶೋಕ ಕಬನೂರ, ಉಮೇಶ ಗೌಳಿ, ಪರುಶರಾಮ ಸೊನ್ನದ, ಸುಭಾಷ್ ಚೌವ್ಹಾನ, ಶ್ರೀಕಾಂತ ಬುಳ್ಳಕ್ಕನವರ, ಕೊಟ್ರ್ಪ ನಡೂರ, ಮುಖ್ಯಾಧಿಕಾರಿ ಮಲ್ಲೇಶ ಆರ್ ಉಪಸ್ಥಿತರಿದ್ದರು.