ಲೋಕದರ್ಶನ ವರದಿ
ಬೆಳಗಾವಿ 27: ದಿ.26ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸಮನಿ ಅವರು ಮಾತನಾಡುತ್ತಾ ಸ್ವಾತಂತ್ರ ಭಾರತದ ಏಕೀಕರಣ ಹಾಗೂ ಪ್ರಜಾಸತಾತ್ಮಕ ರಾಷ್ಟ್ರ ನಿಮರ್ಾಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸಿದರು. ಭಾರತಕ್ಕೆ ವಿಶ್ವಮಾನ್ಯ ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯನ್ನು ಶ್ಲಾಘಿಸಿದರು. 1947 ರಿಂದ ಇಲ್ಲಿಯವರೆಗೆ ಭಾರತ ಸಾಧಿಸಿದ ಎಲ್ಲಾ ಕ್ಷೇತ್ರಗಳ ಬದಲಾವಣೆಗಳನ್ನು ಉಲ್ಲೇಖಿಸಿ ಭವಿಷ್ಯತ್ತಿನ ಭಾರತ ಹಾಗೂ ಯುವಜನತೆ ಸವಾಲುಗಳನ್ನು ಏದುರಿಸಲು ದೇಶಕ್ಕಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಭಾರತದಲ್ಲಿ ಸರ್ವಜನಾಂಗ, ಜಾತಿ, ಧರ್ಮ ಬೇಧವಿಲ್ಲದೆ ಒಂದಾಗಿ ಬಾಳಬೇಕೆಂದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಮುಕ್ತ ಗೊಳಿಸುವ ಸಂಕಲ್ಪ ಮಾಡಬೇಕೆಂದರು. ದೇಶದ ಹಿತಕ್ಕಾಗಿ ನಾವೆಲ್ಲರೂ ಮತದಾನವನ್ನು ಕಡ್ಡಾಯವಾಗಿ ಮಾಡಲು ತಿಳಿಸಿದರು. ಈ ಎರಡು ವಿಷಯಗಳ ಕುರಿತು ಪ್ರತಿಜ್ಞಾ ವಿಧಿಯನ್ನು ಎಲ್ಲರಿಗೂ ಬೋಧಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರೊ. ಸಿದ್ದು ಪಿ. ಆಲಗೂರ, ಕುಲಸಚಿವರು, ಪ್ರೊ. ರಂಗರಾಜ ವನದುರ್ಗ, ಕುಲಸಚಿವರು (ಮೌಲ್ಯಮಾಪನ), ಪರಶುರಾಮ ದುಡಗುಂಟಿ, ಹಣಕಾಸು ಅಧಿಕಾರಿಗಳು,ಪ್ರೊ. ತಳವಾರ ಸಾಬಣ್ಣ, ನಿದರ್ೇಶಕರು, ಪಿ.ಜಿ. ಪ್ರೊಗ್ರಾಮ್ಸ್, ಹಾಗೂ ವಿಶ್ವವಿದ್ಯಾಲಯದ ಇನ್ನಿತರ ಅಧಿಕಾರಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಸಂಶೋಧನಾ/ಸ್ನಾತಕೋತ್ತರ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಪ್ರೊ. ಎಸ್. ಓ. ಹಲಸಗಿ, ಸಂಯೋಜಕರು, ಎನ್.ಎಸ್.ಎಸ್.ಕೋಶ ಇವರು ಸ್ವಾಗತಿಸಿದರು. ಡಾ. ಗಜಾನನ ನಾಯ್ಕ ನಿರೂಪಿಸಿದರು ಹಾಗೂ ಡಾ. ಕಾಂತರಾಜು ಕೆ. ವಂದಿಸಿದರು. ಸ್ನಾತಕೋತ್ತರ ಎನ್.ಎಸ್.ಎಸ್. ವಿದ್ಯಾಥರ್ಿಗಳು ರಾಷ್ಟ್ರವಂದನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.