ಮಹಾಲಿಂಗಪುರ 02: ಪಟ್ಟಣದ ಉರ್ದು ಶಾಲೆಯ ವಿದ್ಯಾರ್ಥಿನಿ ಕುಮಾರಿ ಆಲಿನಾ ಬೂದಿಹಾಳ ಜಿಲ್ಲಾ ಮಟ್ಟದ 2024-25 ನೇ ಸಾಲಿನಪ್ರತಿಭಾ ಕಾರಂಜಿ ಉರ್ದು ಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಸ್ಪರ್ಧೆ ನೀಡಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ನವೆಂಬರ್ 30 ರಂದು ಬಾಗಲಕೋಟ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಕಾರ್ಯಕ್ರಮ ಜರುಗಿತು. ಕುಮಾರಿ ಅಲಿನಾ ದಾರೂಲ್ ಉಲೂಮ್ ಮುಹಮ್ಮದೀಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಈ ಸಾಧನೆಗೈದ ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಜೀರ್ ಅತ್ತಾರ, ಮೌಲಾನಾ ಝಕ್ರಿಯಾಸಾಹಬ ಅನ್ಸಾರಿ, ಮೌಲಾನಾ ಇಲಿಯಾಸ ಮಕಾನದಾರ, ಶಾಲಾ ಖಜಾಂಚಿ ಡಾ. ಜಬ್ಬಾರ್ ಯಕ್ಸಂಬಿ, ದಾವಲಸಾಬ ನಗಾರ್ಚಿ, ಮೇಹಬೂಬ ಜೀರಗಾಳ, ಹಾರೂನ್ ಶಿಲೇದಾರ, ಮೌಲಾಸಾಬ ಮೋಮಿನ್, ಪಾಲಕರಾದ ಹುಸೇನಸಾಬ ಬೂದಿಹಾಳ ಮತ್ತು ಧರ್ಮ ಪತ್ನಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಲ್ಲದೆ ಸಿಬ್ಬಂದಿಗಳು ಉಪಸ್ಥಿತರಿದ್ದು, ರಾಜ್ಯ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ಶಾಲು ಹೊದಿಸಿ ಗೌರವ ಸನ್ಮಾನ ನೀಡಿ ಶುಭ ಹಾರೈಸಿದರು.