ಬಿಜಾಪುರ 15: ರಾಜ್ಯ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷರಾಗಿ ಅಲಿ ಅಲ್ ಹುಸೇನಿ ಉರ್ಫ್ ಅಲಿಬಾಬಾ ಅವರು ಕೆ. ಅನ್ವರ ಪಾಷಾ ವಿರುದ್ಧ ಇಂದು (ಶನಿವಾರದಂದು) ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ಬಿಜಾಪುರ ನಗರದಲ್ಲಿ ಸಂಭ್ರಮಾಚರಣೆ ನಡೆಯಿತು. ಹಾಸೀಂ ಪೀರ ದರ್ಗಾ ಬಳಿ ಮೈನಾರಿಟಿ ಮುಸ್ಲಿಂ ಡೆವೆಲಪ್‌ಮೆಂಟ್ ಕಮಿಟಿ (ಎಂಎಂಡಿಸಿ)ಯಿಂದ ವಿಜಯೋತ್ಸವ ಆಚರಿಸಲಾಯಿತು.
ಅಲಿಬಾಬಾ ಪರ ಜಯಘೋಷಗಳನ್ನು ಕೂಗಿ, ಪಟಾಕಿ ಸಿಡಿಸಿ ಮುಖಂಡರು ಸಂತಸ ವ್ಯಕ್ತಪಡಿಸಿದರು. ಮುಸ್ಲಿಂ ಸಮಾಜದ ವಿವಿಧ ಮುಖಂಡರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಹಾಸೀಂಪಿರ್ ದರ್ಗಾಗೆ ಹೂವಿನ ಹೊದಿಕೆ ಹಾಕಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಲಿಬಾಬಾ ಅವರು ವಕ್ಫ್ ಬೋರ್ಡ್ ಅನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಲಿ ಎಂದು ಮುಖಂಡರು ಹಾರೈಸಿದರು. ಈ ಹಿಂದೆ ವಕ್ಫ್ ಬೋರ್ಡ್‌ನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ವಕ್ಫ್ ಬೋರ್ಡ್ ಅನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವ ಮೂಲಕ ಅಲಿಬಾಬಾ ಅವರು ಮುಸ್ಲಿಂ ಸಮುದಾಯದ ಹಿತ ಕಾಪಾಡಲಿ ಎಂದು ಸಾರ್ವಜನಿಕರು ಆಶಿಸಿದರು.
ಈ ಸಂದರ್ಭದಲ್ಲಿ ಹಾಸೀಂ ಪೀರ ದರ್ಗಾದ ಸೈಯದ್ ಜೈನುಲ್ ಹಾಬೀದೀನ್, ಎಂ.ಎಂ.ಡಿ.ಸಿ ಮುಖಂಡರಾದ ಎಲ್ ಎಲ್ ಉಸ್ತಾದ್, ಬಿ.ಎಚ್ ಮಹಾಬರಿ, ಶಜ್ಜಾದೆಪಿರಾಂ ಮುಶ್ರೀಫ್, ಇರಫಾನ ಶೇಖ, ಹಾಫೀಜ್ ಸಿದ್ದಿಕಿ, ಇಸಾಕಾದ್ರಿ ಮುಶ್ರೀಫ್, ಅನಿಸ ಶೇಖ, ಅಲ್ತಾಫ್ ಲಕ್ಕುಂಡಿ, ಅಯಾಜ ರೊಜೇವಾಲೆ, ಇಮ್ರಾನ್ ಜಹಾಗೀರದಾರ, ಹಿದಾಯತ್ ಮಾಶಾಳಕರ್, ಅಯಾನ್ ಬಾಂಗಿ, ಇಖಲಾಸ್ ಸುನೇವಾಲೆ, ನಿಜಾಮ್ ಹರಿಯಾಲ್, ಖ್ವಾಜಾಅಮಿನ ಮಮದಾಪೂರ, ರಫೀಕ್ ಸೌದಾಗರ್, ಮಸ್ತಾನ್ ಗೌಂಡಿ, ಹನ್ನಾನ ಶೇಖ, ಇಸಾಕ್ ಲಕ್ಕುಂಡಿ, ಸಾದಿಕ್ ಇಮಾರತವಾಲೆ, ಶಬ್ಬೀರ್ ಜಹಾಗಿರದಾರ, ರಫೀಕ್ ಫನಿಬಂದ, ಮುಸಾ ಲಕ್ಕುಂಡಿ, ಸದ್ದಾಂ ಲಕ್ಕುಂಡಿ, ರಫೀಕ್ ಗೌರ ಮುಂತಾದವರು ಉಪಸ್ಥಿತರಿದ್ದರು.