ಮದ್ಯಪಾನ ಯುವಜನರನ್ನು ದಾರಿತಪ್ಪಿಸುತ್ತಿದೆ, ಸಕರ್ಾರ ನಿಷೇಧಿಸಬೇಕು: ಪ್ರಕಾಶಾನಂದಜೀ

ಲೋಕದರ್ಶನವರದಿ

ರಾಣೇಬೆನ್ನೂರು04: ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹತ್ಮಾ ಗಾಂಧೀಜಿಯವರು ತಮ್ಮ ಜೀವಿತದ ಅವಧಿಯವರೆಗೂ ಅಹಿಂಸಾ ಧರ್ಮ ಪರಂಪರೆಯ ಹೋರಾಟ ಮಾಡುತ್ತಾ ಸಾಧನೆ ಮೇರೆದು, ಇಂದು ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಅಂದಿನ ನಿಸ್ವಾರ್ಥ ಸೇವೆ ಜನಪರ ನಿಲುವಿನ ತತ್ವ ಸಿದ್ದಾಂತಗಳು ಇಂದಿಗೂ ಜೀವಂತವಾಗಿವೆ ಅದಕ್ಕೆ ಅವರನ್ನು ಮಹಾತ್ಮಾ ಗಾಂಧೀಜಿ ಎಂದು ಈ ದೇಶ ಸದಾ ಸ್ಮರಣೆ ಮಾಡುತ್ತಲಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜೀ ಮಹಾರಾಜ್ ಹೇಳಿದರು. 

ನಗರದ ನೆಹರು ವರ್ತಕರ ಸಭಾಭವನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕನರ್ಾಟಕ ಜನ ಜಾಗೃತಿ ವೇದಿಕೆ ಆಯೋಜಿಸಿದ್ದ 151ನೇ ಗಾಂಧೀ ಜಯಂತಿ ಸಂಭ್ರಮಾಚರಣೆ, ದುಶ್ಚಟ ಮುಕ್ತ ಸಮಾಜ ನಿಮರ್ಾಣಕ್ಕಾಗಿ ಪಾನಮುಕ್ತರ ಅಭಿನಂಧನಾ ಮತ್ತು ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

ಪ್ರಸ್ತುತ ನಾಗರೀಕ ಸಮಾಜದಲ್ಲಿ ಮದ್ಯಪಾನ ಒಂದು ಹವ್ಯಾಸವಾಗಿ ಬೆಳೆದು ಯುವ ಸಮುದಾಯವನ್ನು ಆವರಿಸಿಕೊಳ್ಳುತ್ತಿರುವುದು ಭಾರತ ದೇಶದ ಮತ್ತು ಕನರ್ಾಟಕ ರಾಜ್ಯದ ಬಹುದೊಡ್ಡ ದುರಂತದ ಸಂಗತಿಯಾಗಿದೆ. ಸಕರ್ಾರಗಳು ಒಂದು ಕಡೆ ಪಾನಮುಕ್ತವಾಗಬೇಕು ಎಂದು ಹೇಳುತ್ತದೆ. ಅದೇ ಸಕರ್ಾರ ಅದರಿಂದಲೇ ಸಕರ್ಾರದ ಬೊಕ್ಕಸಕ್ಕೆ ಹಣ ಬರಲಿದೆ ಎಂದು ಹೇಳುತ್ತದೆ. ಹಾಗಾದರೆ ಇದರಿಂದಲೇ ನಮ್ಮ ದೇಶ ಉದ್ದಾರವಾಗುವುದೇ ಎನ್ನುವುದನ್ನು ಆಲೋಚಿಸಬೇಕಾಗಿದೆ ಎಂದರು. 

ಕ್ಷೇತ್ರ ಧರ್ಮಸ್ಥಳದ ಧಮರ್ಾಧಿಕಾರಿ ಡಾ: ವಿರೇಂದ್ರ ಹೆಗಡೆಜಿಯವರು ಇಂತಹ ಮಹತ್ವದ ಕಾರ್ಯಕ್ರಮದ ಮೂಲಕ ಮಧ್ಯ ವ್ಯಸನಿಗಳನ್ನು ಹೊರತರುವ ವೈಜ್ಞಾನಿಕ ಚಿಂತನೆ ಮಾಡಿರುವುದು ಸ್ವಾಗತಾರ್ಹ. ಇದರಿಂದ ರಾಜ್ಯದಲ್ಲಿ ಲಕ್ಷಾಂತರ ಮಧ್ಯ ವ್ಯಸನಿಗಳು ಕುಡಿತದ ಚಟದಿಂದ ಹೊರಬಂದು ಕುಟುಂಬದಲ್ಲಿ ಆರೋಗ್ಯಕರ ಬದುಕನ್ನು ಸಾಗಿಸುತ್ತಿರುವುದು ಅತ್ಯಂತ ಸಂತೋಷದಾಯಕ ಸಂಗತಿಯಾಗಿದೆ ಎಂದು ಕ್ಷೇತ್ರದ ಕಾರ್ಯವನ್ನು ಶ್ಲ್ಯಾಘಿಸಿದ ಸ್ವಾಮೀಜಿ ಅವರು ನವಜೀವನಕ್ಕೆ ಬದುಕಿಗೆ ಕಾಲಿಟ್ಟವರು. ತಮ್ಮ ಬದುಕು ಸುಂದರಗೊಳಿಸಿಕೊಳ್ಳಲು ಮುಂದಾಗಬೇಕು ಎಂದು ಮಧ್ಯಪಾನ ಮುಕ್ತರಿಗೆ ಕರೆ ನೀಡಿದರು. 

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮುತ್ತಣ್ಣ ಎಲಿಗಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜೀವನ, ಬದುಕು, ಆರೋಗ್ಯ, ಸಂಸ್ಕೃತಿ ಮತ್ತು ಸಂಸ್ಕಾರ ವಿಷಯ ಕುರಿತಂತೆ ಉನ್ನತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರೋ: ಬಿ.ಬಿ.ನಂದ್ಯಾಲ ಅವರು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ನೆಹರು ವರ್ತಕರ ಸಂಘದ ಅಧ್ಯಕ್ಷ ವಾಸುದೇವಸಾ ಲದ್ವಾ, ಸ್ವಾ.ಕ.ರ.ವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶ ಎಮ್ಮಿ, ಯೋಜನಾಧಿಕಾರಿ ಸತೀಶ ಶೇಟ್, ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ಪ್ರಸನ್ನಕುಮಾರ, ಜಿಲ್ಲಾ ಯೋಜನಾಧಿಕಾರಿ ಮಹಾಬಲ ಕಲಾಲ,ವನಿತಾ ಗುತ್ತಲ್ಲ ಮಾತರ್ಾಂಡಪ್ಪ ನೇಕಾರ, ಡಾ: ಬಸವರಾಜ ಕೇಲಗಾರ, ಶೇಖಪ್ಪ ನಾಡರ, ಬಸವರಾಜ ಹುಲ್ಲತ್ತಿ, ಮಂಜುನಾಥ ಸೇರಿದಂತೆ ಸ್ವಸಹಾಯ ಸಂಘದ ಒಕ್ಕೂಟ ಮತ್ತು ಪ್ರಗತಿ ಬಂಧು ಒಕ್ಕೂಟದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. 

ನವಜೀವನ ಸಮಿತಿ ಸದಸ್ಯರಾದ ನಯನ ಮನೋಹರ, ಗಂಗಪ್ಪ ಊದಗಟ್ಟಿ, ಚಂದ್ರಪ್ಪ ಭಾಕರ್ಿ ಸೇರಿದಂತೆ ಮತ್ತಿತರರು ತಮ್ಮ ಕುಡಿತದಲ್ಲಿದ್ದ ಪರಿಸ್ಥಿತಿಯನ್ನು ಅವಲೋಕಿಸಿ ಮಾತನಾಡಿದರು. ನಂತರ ನಡೆದ ಸಂಘಟನೆ ನೂರಾರು ಮಹಿಳೆಯರು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲ್ಗೊಂಡ ಸಾವಿರಾರು ಮಹಿಳೆಯರ ಜನಮನ ರಂಜಿಸಿದರು.