ಅಲನ್ ಬಾರ್ಡರ್ ಶ್ರೇಷ್ಠ ಆಸ್ಟ್ರೇಲಿಯನ್ ಇಲೆವೆನ್ ನಾಯಕ: ಶೇನ್ ವಾರ್ನ್

ನವದೆಹಲಿ, ಮಾ 30, ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಸೋಮವಾರ ತಮ್ಮ ಶ್ರೇಷ್ಠ ಆಸ್ಟ್ರೇಲಿಯಾ ಟೆಸ್ಟ್ ಇಲೆವೆನ್ ತಂಡವನ್ನು ಪ್ರಕಟಿಸಿದ್ದು, ಅಲನ್ ಬಾರ್ಡರ್ ಅವರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಿದ್ದಾರೆ. ಆಸ್ಟ್ರೇಲಿಯಾ ಪರ ಅತ್ಯಧಿಕ ವಿಕೆಟ್ ಕಬಳಿಸಿದ ಸ್ಪಿನ್ನರ್ ವಾರ್ನ್, ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಆಸೀಸ್ ನ ಶ್ರೇಷ್ಠ ತಂಡವನ್ನು ಪ್ರಕಟಿಸಿದ್ದಾರೆ. ವಾರ್ನ್ ಶ್ರೇಷ್ಠ ಆಸ್ಟ್ರೇಲಿಯಾ ಟೆಸ್ಟ್ ತಂಡ: ಮ್ಯಾಥ್ಯೂ ಹೇಡನ್, ಮೈಕಲ್ ಸ್ಲೇಟರ್, ರಿಕಿ ಪಾಂಟಿಂಗ್, ಮಾರ್ಕ್ ವಾ, ಅಲನ್ ಬಾರ್ಡರ್, ಸ್ಟೀವ್ ವಾ, ಆ್ಯಡಂ ಗಿಲ್ ಕ್ರಿಸ್ಟ್, ತಿಮ್ ಮೇ, ಜೇಸನ್ ಗಿಲ್ಲೆಸ್ಪಿ, ಗ್ಲೆನ್ ಮೆಕ್ ಗ್ರಾಥ್ ಮತ್ತು ಬ್ರೂಸ್ ರೀಡ್.50 ವರ್ಷದ ವಾರ್ನ್, ಮೆರ್ವ್ ಹ್ಯುಜೇಶ್ ಅವರನ್ನು ತಂಡದ 12ನೇ ಆಟಗಾರನಾಗಿ ನೇಮಕ ಮಾಡಿದ್ದಾರೆ.ಹೇಡನ್ ಮ್ತತು ಮೈಕಲ್ ಸ್ಲೇಟರ್ ಅವರನ್ನು ಆರಂಭಿಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಆಸ್ಟ್ರೇಲಿಯಾ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ ಮನ್ ಗಳ ಪೈಕಿ ಒಬ್ಬರಾಗಿರುವ ಡೇವಿಡ್ ವಾರ್ನರ್  ಅವರನ್ನು ಆಯ್ಕೆ ಮಾಡದಿರುವ  ಬಗ್ಗೆ ತಿಳಿಸಿರುವ ಅವರು, ತಮ್ಮೊಂದಿಗೆ ಆಡಿರುವ ಆಟಗಾರರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.