ಅಕ್ಷರದಾಸೋಹ ಕಾಮರ್ಿಕರಿಗೆ ಗೌರವಧನ ಪಾವತಿಸುವಂತೆ ಮನವಿ

ಲೋಕದರ್ಶನವರದಿ

ಬಳ್ಳಾರಿ ಮೇ 30. ಕೊರೋನಾ ಸೋಂಕನ್ನುತಡೆಗಟ್ಟಲುಕೇಂದ್ರ ಸಕರ್ಾರವು ದೇಶದಾದ್ಯಂತ ಘೋಷಿಸಲಾದ ಲಾಕ್ಡೌನ್ ಹಿನ್ನಲೆಯಲ್ಲಿ ಕಾಮರ್ಿಕರುಅತ್ಯಂತ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ರಾಜ್ಯ ಸಕರ್ಾರವು ಶಾಲೆಗಳಿಗೆ ಲಾಕ್ಡೌನ್ಗಿಂತ  ಮುಂಚೆಯೇ ರಜೆ ಕೊಟ್ಟಿದೆ. ಇದೀಗ 4.0 ಲಾಕ್ಡೌನ್ ಅವಧಿಗಳು ಮುಗಿದಿವೆ, ಇದೀಗ 5ನೇ ಅವಧಿಗೆ ಕಾಲಿಟ್ಟಿದೆ. 

ಅಕ್ಷರ ದಾಸೋಹ ಕಾಮರ್ಿಕರು ಅದೇರೀತಿಯಾಗಿರಾಜ್ಯದಲ್ಲಿ ಶಾಲೆಗಳು ರಜೆ ಘೋಷಿಸಿದ್ದಾಗಲೂ ಅಕ್ಷರದಾಸೋಹಕಾಮರ್ಿಕರಿಗೆ ಮನೆಮನೆಗೆ ಆಹಾರಧಾನ್ಯತಲುಪಿಸುವ ಕೆಲಸ ನೀಡಿಅವರಿಗೆಎಪ್ರಿಲ್ 15ರ ವರೆಗೂಗೌರವಧನವನ್ನು ಸಕರ್ಾರ ನೀಡಲು ಸೂಚನೆ ನೀಡಿದೆಯಾದರೂ ಆ ಹಣವು ಈವರೆಗೆ ಕಾಮರ್ಿಕರ ಖಾತೆ ಸೇರಿಲ್ಲ.

      ಸಾಮಾನ್ಯವಾಗಿ ಅಕ್ಷರದಾಸೋಹ ಕಾಮರ್ಿಕರು ಬೇಸಿಗೆಯ ರಜಾಅವಧಿಯಲ್ಲಿಗೌರವಧನಇಲ್ಲದಿರುವುದರಿಂದ ಬೇರೆ ರೀತಿಯ ಕೂಲಿ ಕೆಲಸಗಳಲ್ಲಿ ತೊಡಗಿತಮ್ಮಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದರು.

     ಆದರೆ ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಆಥರ್ಿಕ ಚಟುವಟಿಕೆಗಳು ಇಲ್ಲದೇ ಇರುವುದರಿಂದಲೂ ಹಾಗೂ ಇವರ ಕುಟುಂಬದ  ದುಡಿಯುವ ಕೈಗಳಿಗೂ ಕೆಲಸಗಳು ಇಲ್ಲದಾಗಿವೆ. ಇದರಿಂದಾಗಿ ಈ ಕುಟುಂಬಗಳು ಜೀವನ ನಿರ್ವಹಣೆ ಇಲ್ಲದೇ ಅನಿವಾರ್ಯವಾಗಿ ಬೀದಿಗೆ ಬೀಳುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

   ಆದ್ದರಿಂದ ಸಕರ್ಾರವು ಈ ಅಸಾಧಾರಣ ಸಂದರ್ಭದಲ್ಲಿಅಕ್ಷರ ದಾಸೋಹ ಕಾಮರ್ಿಕರಿಗೆ ಕನಿಷ್ಠ ಜೀವನ ನಿರ್ವಹಣೆಗಾಗಿ ಸಕರ್ಾರಕನಿಷ್ಟ ಅನುಕೂಲಗಳನ್ನು ಮಾಡಿಕೊಡಬೇಕು. ಮುರಾಜರ್ಿ ವಸತಿ ಶಾಲೆಗಳಲ್ಲಿನ ಉಳಿದ ದಿನಸಿ ದಾಸ್ತಾನನ್ನು ಎಲ್ಲ ಗುತ್ತಿಗೆ ನೌಕರರಿಗೆ ಹಂಚಿದ್ದಾರೆ.

  ಅದೇ ರೀತಿಯಾಗಿ ಅಕ್ಷರ ದಾಸೋಹ ಯೋಜನೆಯಲ್ಲಿ ಶಾಲೆಯಲ್ಲಿ ಉಳಿದ ಆಹಾರ-ದಿನಸಿ ವಸ್ತುಗಳ ದಾಸ್ತಾನನ್ನು ಎಲ್ಲ ಅಕ್ಷರ ದಾಸೋಹ ಕಾಮರ್ಿಕರಿಗೆ ಹಂಚಬೇಕು, ಇತ್ಯಾದಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಬೇಕೆಂದುಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

 ಈ ಪ್ರತಿಭಟನೆಯಲ್ಲಿ ಎ.ದೇವದಾಸ್ ಜಿಲ್ಲಾ ಕಾರ್ಯದಶರ್ಿ, ಂಗಖಿಗಅ, ಅಕ್ಷರ ದಾಸೋಹ ಕಾಮರ್ಿಕರ ಸಂಘದ ಸಂಘಟನಾಕಾರರಾದ ಎಸ್.ಜಿ.ನಾಗರತ್ನ, ಪಿ.ಶಮರ್ಾಸ್ ಹಾಗೂ ಸದಸ್ಯರುಗಳಾದ ಲಕ್ಷ್ಮಿ, ಕವಿತಾ, ನಾಗರತ್ನ, ಜಯಲಕ್ಷ್ಮಿ, ಮುತ್ತಮ್ಮ, ಶ್ಯಾಮಲಮ್ಮ, ಹೇಮಾವತಿ, ಹನುಮಂತಮ್ಮ, ಜಡೆಮ್ಮ, ರುದ್ರಯ್ಯ ಇನ್ನಿತರರು ಉಪಸ್ಥಿತರಿದ್ದರು