ಸೈಕೋ ಕಿಲ್ಲರ್ ಆಗಲು ಅಕ್ಷಯ್ ಗೆ ಇಷ್ಟವಂತೆ!

ಮುಂಬೈ, ಜ. 8 ಸೈಕೋ ಕಿಲ್ಲರ್ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಅಕ್ಷಯ್ ಕುಮಾರ್ ಅಭಿನಯದ ಕೇಸರಿ, ಹೌಸ್ ಫುಲ್-4, ಮಿಶನ್ ಮಂಗಲ್ ಹಾಗೂ ಗುಡ್ ನ್ಯೂಸ್ ಚಿತ್ರಗಳು ಸಖತ್ ಹಿಟ್ ಆಗಿದ್ದವು. ಸದ್ಯ ಅಕ್ಷಯ್, ಸೂರ್ಯವಂಶಿ ಚಿತ್ರೀಕರಣ ಪೂರ್ಣಗೊಳಿಸಿದ್ದು, ಲಕ್ಷ್ಮೀ ಬಾಂಬ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದಾದ ನಂತರ ಅವರು ಚಂದ್ರಪ್ರಕಾಶ್ ತ್ರಿವೇದಿ ನಿರ್ದೇಶನದ ಪೃಥ್ವಿ ರಾಜ್ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ. ಇತ್ತೀಚೆಗಷ್ಟೇ ಅಕ್ಷಯ್ ಅವರು ಮಾನಸಿಕ ಖಿನ್ನತೆಯಂತಹ ಗಂಭೀರ ಸಮಸ್ಯೆ ಕುರಿತು ಚಿತ್ರ ಮಾಡುವ ಆಸೆಯನ್ನು ಹೊರಹಾಕಿದ್ದರು. ಈಗ ತಮಗೆ ಸೈಕೋ ಕಿಲ್ಲರ್ ದಂತಹ ಪಾತ್ರದಲ್ಲಿ ಅಭಿನಯಿಸುವ ಆಸೆ ಎಂದು ಹೇಳಿಕೊಂಡಿದ್ದಾರೆ.