ವಿಶ್ವದ ಅತಿ ಹೆಚ್ಚು ಗಳಿಸುವ ಖ್ಯಾತನಾಮರಲ್ಲಿ ಸ್ಥಾನ ಪಡೆದ ಅಕ್ಷಯ್ ಕುಮಾರ್

ಮುಂಬೈ, ಜೂನ್ 5, ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರು ವಿಶ್ವದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಖ್ಯಾತನಾಮರಲ್ಲಿ ಸೇರಿದ್ದಾರೆ.ಫೋರ್ಬ್ಸ್ 2020 ರಲ್ಲಿ ಅತಿ ಹೆಚ್ಚು ಗಳಿಸಿದ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಬಾರಿ ಅಕ್ಷಯ್ ಕುಮಾರ್ ಮಾತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ವರ್ಷದ 100 ಜನರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ 365 ಕೋಟಿ ರೂ.ಗಳ ಗಳಿಕೆಯೊಂದಿಗೆ 52 ನೇ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ಕಳೆದ ವರ್ಷದಂತೆ, ಅವರ ಶ್ರೇಯಾಂಕ ಸ್ವಲ್ಪ ಕುಸಿದಿದೆ.

ಕಳೆದ ವರ್ಷ ಅಕ್ಷಯ್ ಕುಮಾರ್ ಒಟ್ಟು 490 ಕೋಟಿ ಗಳಿಸಿ 33 ನೇ ಸ್ಥಾನದಲ್ಲಿದ್ದರು.“ನೀವು ಕಾಲಾಕ್ಕೆ ತಕ್ಕಂತೆ ನಿಮ್ಮನ್ನು ಬದಲಾಯಿಸಿಕೊಳ್ಳಬೇಕು. ಇಂದು ಚಲನಚಿತ್ರಗಳ ಕಥೆಗಳು ಬದಲಾಗಿವೆ, ಪ್ರೇಕ್ಷಕರು ಬದಲಾಗಿದ್ದಾರೆ, ನನ್ನ ಚೆಕ್‌ನಲ್ಲಿ ಸೊನ್ನೆಗಳು ಕೂಡ ಬದಲಾಗಿವೆ. ಎಲ್ಲವೂ ಬದಲಾಗುತ್ತಿದೆ. ಇದು ನನ್ನ ಯಶಸ್ಸಿನ ಕೀಲಿಯಾಗಿದೆ. ಈ ಮೊದಲು ನಾನು ಚಲನಚಿತ್ರಗಳಿಗೆ ಹಣಗಣಿಸಲು ಮಾತ್ರ ಬಂದೆದ್ದೆ. ಆದರೆ ಈಗ ಹಣ ಸಂಪಾದಿಸಿದ ನಂತರ ನಾನು ಉತ್ತಮ ನಟನಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ” ಎಂದಿದ್ದಾರೆ.“ನಾನು ಕೇವಲ 10 ಕೋಟಿ ರೂ. ಗಳಿಸಲು ಇಚ್ಛಿಸಿದ್ದೆ. ಆದರೆ ನಾನು ಮನುಷ್ಯ, ನನ್ನ ಮಿತಿಗಳು ಬೆಳೆದಿವೆ. ನಾನು 10 ಕೋಟಿ ಸಂಪಾದಿಸಿದಾಗ, ನಾನು ಯಾಕೆ 100 ಕೋಟಿ ಗಳಿಸಲು ಸಾಧ್ಯವಿಲ್ಲ ಎಂದು ಯೋಚಿಸಿದೆ. ನಿಜ ಹೇಳಬೇಕೆಂದರೆ, ಇದನ್ನು ದಾಟಿದ ಮೇಲೆ ನಿಲ್ಲಲೇ ಇಲ್ಲ” ಎಂದು ಅಕ್ಷಯ್ ತಿಳಿಸಿದ್ದಾರೆ.