ಮುಂಬೈ, ಜೂನ್ 30: 'ಲಕ್ಷ್ಮಿ ಬಾಂಬ್' ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ತಮಗೆ ಹೊಸ ಅನುಭವ ಸಿಕ್ಕಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.ರಾಘವ್ ಲಾರೆನ್ಸ್ ನಿರ್ದೇಶನದ 'ಲಕ್ಷ್ಮಿ ಬಾಂಬ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ನಟಿಸಲಿದ್ದಾರೆ. ಕಿಯಾರಾ ಅಡ್ವಾಣಿ 'ಲಕ್ಷ್ಮಿ ಬಾಂಬ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಲಕ್ಷ್ಮಿ ಬಾಂಬ್' ಆರಂಭದಲ್ಲಿ ಮೇ 22 ರಂದು ಬಿಡುಗಡೆಯಾಗಬೇಕಿತ್ತು. ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ, ಈ ಚಿತ್ರವು ಈಗ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಅಕ್ಷಯ್ ಅವರು ಚಿತ್ರದಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು, ಚಿತ್ರದ ಎರಡು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.
'ಲಕ್ಷ್ಮಿ ಬಾಂಬ್' ಪಾತ್ರದಲ್ಲಿ ಹೊಸತನ ಇತ್ತು. ಚಿತ್ರದ ಯಶಸ್ಸಿಗಾಗಿ ಬೆವರು ಹರಿಸಿದ್ದೇನೆ. ನಾನು ಹಲವಾರು ರಿಟೇಕ್‌ಗಳನ್ನು ಸಹ ತೆಗೆದುಕೊಂಡಿದ್ದೇನೆ. ರಾಘವ್ ಚಿತ್ರದೊಂದಿಗೆ ಹೊಸದನ್ನು ಅನುಭವಿಸಲು ಅವಕಾಶ ನೀಡಿದರು. ಅವರು ನನ್ನೊಳಗಿದ್ದ ವಿಶಿಷ್ಠ ನಟನನ್ನು ಗುರುತಿಸಿದರು. ಅದು ನನಗೆ ತಿಳಿದಿರಲಿಲ್ಲ. ಈ ಪಾತ್ರವು ನಾನು ಚಿತ್ರಿಸಿದ ಎಲ್ಲ ಪಾತ್ರಗಳಿಗಿಂತ ಭಿನ್ನವಾಗಿದೆ" ಎಂದು ಅಕ್ಷಯ್ ತಿಳಿಸಿದ್ದಾರೆ.“ಲಿಂಗ ಸಮಾನತೆಯ ಬಗ್ಗೆ ನನ್ನ ಆಲೋಚನೆಗಳನ್ನು ಬಲಪಡಿಸಲು ಈ ಚಿತ್ರ ನನಗೆ ಕಲಿಸಿದೆ. ಜೀವನದಲ್ಲಿ ನೀವು ಏನು ಬೇಕಾದರೂ ಆಗಿರಿ, ಆದರೆ ಅಜ್ಞಾನಿಯಾಗಬೇಡಿ” ಎಂದಿದ್ದಾರೆ.