ಅಕ್ಸಾಯ್ ಚಿನ್ ಮತ್ತು ಪಿಒಕೆ ಕಾಶ್ಮೀರದ ಅವಿಭಾಜ್ಯ ಅಂಗ: ಅಮಿತ್ ಶಾ ಗುಡುಗು

  ನವದೆಹಲಿ, ಆ 06   ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ಸಂಬಂಧ ಸಂಸತ್ ನಲ್ಲಿ ಶಾಸನ ರೂಪಿಸುವುದನ್ನು ಅಥವಾ ನಿರ್ಣಯ ಕೈಗೊಳ್ಳುವದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ  

  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು  ಸಂಬಂಧ ಹೊರಡಿಸಲಾದ ಶಾಸನಬದ್ಧ ನಿರ್ಣಯ ಮತ್ತು ಸಂಬಂಧಿತ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಅಕ್ಸಾಯ್ ಚಿನ್ ಕೂಡ ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗವಾಗಿದ್ದು, 370(1)ರ ಎಲ್ಲ ನಿಯಮಗಳೂ ಜಮ್ಮು ಕಾಶ್ಮೀರಕ್ಕೆ ಅನ್ವಯಿಸುತ್ತದೆ ಹಾಗೂ ದೇಶದ ರಾಜ್ಯಗಳ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿರುತ್ತದೆ ಎಂದರು 

  ಸಂಸತ್ ಬಹು ದೊಡ್ಡ ಪಂಚಾಯಿತಿಯಾಗಿದ್ದು, ಯಾವುದೇ ನಿರ್ಧಾರ ಕೈಗೊಳ್ಳಬಹುದಾದ ಸಾಮಥ್ರ್ಯ ಹೊಂದಿರುತ್ತದೆ ಎಂದು ಒತ್ತಿ ಹೇಳಿದರು. 

  ಕಾಂಗ್ರೆಸ್ ನಾಯಕರ ಅಧೀರ್ ರಂಜನ್ ಚೌಧರಿ ಅವರು, ನಿರ್ಣಯವನ್ನು ರಾಜ್ಯಕ್ಕೆ ಸಂಬಂಧಿಸಿದ ಮಸೂದೆಗಳನ್ನು ಏಕಪಕ್ಷೀಯವಾಗಿ ತರುವುದು, ಇನ್ನೊಂದು ಕಡೆ  ಜಮ್ಮು ಮತ್ತು ಕಾಶ್ಮೀರ  ಭಾರತ -ಪಾಕ್ ನಡುವಣ 'ದ್ವಿಪಕ್ಷೀಯ' ವಿಷಯ ಎಂದು ಸರ್ಕಾರ ಮತ್ತೆ  ಹೇಳುತ್ತಿರುವಾಗಲೇ ಈ ತೀರ್ಮಾನ ಸರಿಯೇ, ಸಮರ್ಥನೀಯವೇ,   ಮೇಲಾಗಿ 1949 ರಲ್ಲಿ  ಕಾಶ್ಮೀರದ ಬಗ್ಗೆ  ವಿಶ್ವಸಂಸ್ಥೆ  ಉಲ್ಲೇಖಿಸಿದೆ ಎಂಬುದನ್ನು ಸರಕಾರ ಮರೆತಿದೆಯೇ ಪಶ್ನಿಸಿದ ಹಿನ್ನೆಲೆಯಲ್ಲಿ ಅಮಿತ್ ಶಾ, ಈ ಎಲ್ಲ ಸ್ಪಷ್ಟನೆ ನೀಡಿದರು. 

  ಈ ಸದನವು ಐತಿಹಾಸಿಕ ಕ್ಷಣಗಳನ್ನು ಕಂಡಿದೆ, ಮತ್ತು ಜಮ್ಮು ಕಾಶ್ಮೀರ ಮರುಸಂಘಟನೆ ಮಸೂದೆ, 2019 ರೊಂದಿಗೆ ಹೊಸ ಅಧ್ಯಾಯ ಸೇರ್ಪಡೆಯಾಗಿದೆ ಸರ್ಕಾರದ ಈ ಕ್ರಮದಿಂದ ಜಮ್ಮು ಮತ್ತು ಕಾಶ್ಮೀರ ಇಡೀ ದೇಶಕ್ಕೆ ಸೇರಲಿದೆ ಎಂದು ಹೇಳಿದರು. 

  ಮಸೂದೆಯ ಸಾಂವಿಧಾನಿಕ ಸಿಂಧುತ್ವದ ಕುರಿತು ಪ್ರಸ್ತಾಪಿಸಿ, ರಾಷ್ಟ್ರಪತಿಯವರು ಸೋಮವಾರ ಸಾಂವಿಧಾನಿಕ ಆದೇಶ 2019 ಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿಸಿದರು 

  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟಿದ್ದ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸುವ ಸರ್ಕಾರದ ನಿರ್ಧಾರದೊಂದಿಗೆ, ಜಮ್ಮು ಕಾಶ್ಮೀರದ ಸಂವಿಧಾನ ಸಭೆಯನ್ನು ಇನ್ನು ಮುಂದೆ "ರಾಜ್ಯದ ವಿಧಾನಸಭೆ" ಎಂದು ಕರೆಯಲಾಗುವುದು ಎಂದು ಅಧ್ಯಕ್ಷೀಯ ಆದೇಶವು ಸ್ಪಷ್ಟಪಡಿಸಿದೆ. 

  'ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಆನ್ವಯಿಕ) ಆದೇಶ, 2019 ರ ಶೀಷರ್ಿಕೆಯಡಿಯಲ್ಲಿ ಕಾನೂನು ಸಚಿವಾಲಯದ ಅಧಿಸೂಚನೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಯಾವುದೇ ಉಲ್ಲೇಖಗಳನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುವ ಉಲ್ಲೇಖಗಳನ್ನು ಒಳಗೊಂಡಂತೆ ಮಂತ್ರಿಗಳ ಪರಿಷತ್ತಿನ ಸಲಹೆಯಂತೆ ನಿರ್ಣಯಿಸಲಾಗುವುದು' ಎಂದು ಹೇಳಿದೆ   

  ಪ್ರಸ್ತುತ ಭಾರತೀಯ ಸಂವಿಧಾನವೇ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿರುವ ಅಮಿತ್ ಶಾ, 370 (3) ನೇ ವಿಧಿಯನ್ನು ಬಳಸಿಕೊಂಡು, ಸಂವಿಧಾನ ಸಭೆಯ ಒಪ್ಪಿಗೆ ಇದ್ದಲ್ಲಿ ರಾಷ್ಟ್ರಪತಿಯವರು ಆರ್ಟಿಕಲ್ 370 ಅನ್ನು ನಿಷ್ಕ್ರಿಯಗೊಳಿಸಬಹುದು ಎಂದರು. 

  ಇಂತಹ ಆದೇಶಗಳನ್ನು ರಾಷ್ಟ್ರಪತಿಯವರು ಈ ಹಿಂದೆ 1952 ಮತ್ತು 1965ರಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ.'ಮಹಾರಾಜ' ಪದಕ್ಕೆ ಪರ್ಯಾಯವಾಗಿ 'ಸದರ್ ಎ ರಿಯಾಸತ್' ಎಂದೂ ನಂತರ ' ಗವರ್ನರ್' ಎಂದು ಬದಲಾಯಿಸಲಾಯಿತು ಎಂದು ಹೇಳಿದರು. 

   ಲಡಾಖ್ ಜನರ ಆಶಯದಂತೆ ಇದೀಗ ಶಾಸಕಾಂಗ ರಹಿತ ಕೇಂದ್ರಾಡಳಿತ ಪ್ರದೇಶವಾಗಿದ್ದು, ಜಮ್ಮು ಕಾಶ್ಮೀರ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ, ಶಾಸಕಾಂಗ ಹೊಂದಿರುತ್ತದೆ  ಎಂದು ತಿಳಿಸಿದರು. 

 ಇನ್ನು ಮುಂದೆ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಕೌನ್ಸಿಲ್ ಸಕ್ರಿಯವಾಗಿರುತ್ತವೆ ಮತ್ತು ಅದರ ಪ್ರತಿನಿಧಿಗಳು ಮಂತ್ರಿಗಳಂತೆ ಕಾರ್ಯನಿರ್ವಹಿಸುತ್ತಾರೆ   ಪ್ರಸ್ತಾವಿತ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ - ಮುಖ್ಯಮಂತ್ರಿಯಿದ್ದು, ಅವರು ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ನೋಡಿಕೊಳ್ಳುತ್ತಾರೆ ಎಂದ ಅಮಿತ್ ಶಾ, ಐತಿಹಾಸಿಕ ನಿರ್ಣಯವನ್ನು ಸದಸ್ಯರು ಬೆಂಬಲಿಸುವಂತೆ ಮನವಿ ಮಾಡಿದರು. 

  ಚರ್ಚೆಯಲ್ಲಿ ಪಾಲ್ಗೊಂಡಿದ್ದ ಉಧಂಪುರದ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್, 370ನೇ ವಿಧಿಯು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿತ್ತು, ಇದು ಕಾಶ್ಮೀರಿ ಯುವಕರ ಹಾದಿ ತಪ್ಪಿಸಲು ಪಾಕಿಸ್ತಾನಕ್ಕೆ ಅವಕಾಶವಾಗಿತ್ತು ಎಂದರು.