ಲೋಕದರ್ಶನ ವರದಿ
ರಾಣೇಬೆನ್ನೂರು21: ಅಕ್ಕ ಮಹಾದೇವಿಯು ಸ್ತ್ರೀ ಸಮಾನತೆಗಾಗಿ 12ನೇ ಶತಮಾನದಲ್ಲಿಯೇ ಕಹಳೆಯನ್ನು ಮೊಳಗಿಸಿದ ಮಹಾನ್ ಸಾದ್ವಿ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರು ಸಹಿತ ಸಿಟ್ಟಿನ ಕೈಗೆ ಬುದ್ದಿ ಕೊಡದೇ, ಸಮಾಧಾನದಿಂದ ಅವುಗಳನ್ನು ಎದುರಿಸಬೇಕು ಎನ್ನುವ ತತ್ವವನ್ನು ತನ್ನ ವಚನಗಳ ಮೂಲಕ ಸ್ತ್ರೀ ಕುಲಕ್ಕೆ ಸಾರಿದವಳಾಗಿದ್ದಾಳೆ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾಜರ್ುನ ಶಿವಾಚಾರ್ಯರು ಹೇಳಿದರು.
ಅವರು ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದಲ್ಲಿ ನಡೆದ 113ನೇ ದವನದ ಹುಣ್ಣಿಮೆ ಮಾಸಿಕ ಧರ್ಮ ಜಾಗೃತಿ ಸಮಾರಂಭದ ಮಾತನಾಡಿದರು. ಅಕ್ಕಮಹಾದೇವಿಯು ತನ್ನ ಅನೇಕ ಕಷ್ಟ-ನಷ್ಟಗಳ ಮಧ್ಯದಲ್ಲಿಯೇ ತನ್ನ ವಚನದ ಮೂಲಕ ಸ್ತುತಿ ನಿಂದೆಗಳು ಬಂದೊಡೆ ಸಮಾಧಾನಿಯಾಗಿರಬೇಕು ಎನ್ನುವ ಸಂದೇಶದ ಮೂಲಕ ಸಮಗ್ರ ಭಾರತೀಯ ನಾರಿಗೆ ಧೈರ್ಯ ಮತ್ತು ಸ್ಥೈರ್ಯವನ್ನು ತುಂಬುವುದರ ಮೂಲಕ ಮಾದರಿಯಾಗಿದ್ದಾಳೆ ಎಂದರು.
ಅಕ್ಕಮಹಾದೇವಿಯ ಜನನ, ಬಾಲ್ಯ ಮತ್ತು ಜೀವನ ವಿಷಯವಾಗಿ ಡಾ|| ಪುಷ್ಪಾವತಿ ಶೆಲವಡಿಸಮಠ ಅವರು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ತೊಟ್ಟಿಲೋತ್ಸವ ಮತ್ತು ಮುತೈದೆಯರಿಗೆ ಉಡಿ ತುಂಬುವ ಧಾಮರ್ಿಕ ಸಂಪ್ರದಾಯ ಕಾರ್ಯವನ್ನು ನೆರವೇರಿಸಲಾಯಿತು.
ಕದಳಿ ವೇದಿಕೆ ಹಾಗೂ ದಾನೇಶ್ವರಿ ಮಹಿಳಾ ಮಂಡಳವು ಸಂಯುಕ್ತವಾಗಿ ಆಯೋಜಿಸಿದ್ದವು. ಲಿಖಿತ ಸ್ಪದರ್ೆಯಲ್ಲಿ ವಿಜೇತರಾದ ಗಾಯತ್ರಮ್ಮ ಕುರವತ್ತಿ, ಕುಸುಮಾ ಮುದಿಗೌಡ್ರ, ಎಸ್.ಎಂ.ನೇತ್ರಾವತಿ ಸೇರಿದಂತೆ ಮತ್ತಿತರರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರೋ|| ಅ.ಸಿ.ಹಿರೇಮಠ, ಬಸವರಾಜ ಪಟ್ಟಣಶೆಟ್ಟಿ, ವ್ಹಿ.ವಿ.ಹರಪನಹಳ್ಳಿ, ಉಮೇಶ ಗುಂಡಗಟ್ಟಿ, ಜೆ.ಎಂ.ಮಠದ, ಸುನಂದಮ್ಮ ತಿಳವಳ್ಳಿ, ಕಸ್ತೂರಿ ಪಾಟೀಲ, ಭಾಗ್ಯಶ್ರೀ ಗುಂಡಗಟ್ಟಿ, ಪಾರ್ವತೆಮ್ಮ ಬೆನಕನಕೊಂಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.