ಲಂಡನ್ 11: ಭಾರತ ಕ್ರಿಕೆಟ್ ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅಜರ್ುನ್ ತೆಂಡೂಲ್ಕರ್ ಲಾಡ್ರ್ಸ ಮೈದಾನದಲ್ಲಿ ರೇಡಿಯಾ ಮಾರುತ್ತಿದ್ದಾರೆ, ಅಲ್ಲದೆ ಇದಕ್ಕೆ ಟಬರ್ೊನೇಟರ್ ಹರ್ಭಜನ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಈ ವೇಳೆ ಮೈದಾನದಲ್ಲಿದ್ದ ನೀರನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗಳಿಗೆ ಸಹಾಯ ಮಾಡಿ ಅಜರ್ುನ್ ಸುದ್ದಿಗೆ ಗ್ರಾಸವಾಗಿದ್ದರು. ಅಜರ್ುನ್ ತೆಂಡೂಲ್ಕರ್ ಕ್ರಿಕೆಟ್ ದಂತಕಥೆಯ ಪುತ್ರನಾಗಿದ್ದರೂ ಸಿಬ್ಬಂದಿಗೆ ನೆರವು ನೀಡುವ ಮೂಲಕ ಲಾಡ್ರ್ಸ ಆಡಳಿತ ಮಂಡಳಿಯಿಂದಲೂ ಶ್ಲಾಘನೆಗೆ ಪಾತ್ರರಾಗಿದ್ದರು. ಇದೀಗ ಲಾಡ್ರ್ಸ ಮೈದಾನದ ಆವರಣದಲ್ಲಿ ಡಿಜಿಟಲ್ ರೇಡಿಯೋ ಸೆಟ್ ಗಳನ್ನು ಮಾರಾಟ ಮಾಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಇನ್ನೂ ಅಚ್ಚರಿಯ ವಿಚಾರವೆಂದರೆ ಅಜರ್ುನ್ ತೆಂಡೂಲ್ಕರ್ ಗೆ ಟಬರ್ೊನೇಟರ್ ಹರ್ಭಜನ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ. ಅಜರ್ುನ್ ತೆಂಡೂಲ್ಕರ್ ರೇಡಿಯೋ ಸೆಟ್ ಮಾರುತ್ತಿರುವ ಕುರಿತು ಭಜ್ಜಿ ಫೋಟೋ ಟ್ವೀಟ್ ಮಾಡಿ ಗುಡ್ ಬಾಯ್ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಳೆಯಿಂದಾಗಿ ಲಾಡ್ರ್ಸ ನಲ್ಲಿ ಎರಡನೇ ದಿನದಾಟ ಸ್ಥಗಿತವಾಗಿದ್ದ ವೇಳೆ ಅಜರ್ುನ್ ತೆಂಡೂಲ್ಕರ್ ಲಾಡ್ರ್ಸ ಅವರಣದಲ್ಲಿ ರೇಡಿಯೋ ಸೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಳಿ ಬಂದಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಭಜ್ಜಿ ಆ ರೇಡಿಯೋ ಸೆಟ್ ಗಳನ್ನು ಅಜರ್ುನ್ ಕೊರಳಿಗೆ ಹಾಕಿ ಫೋಟೋಗೆ ಪೋಸ್ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.