ಮುಂಬೈ, 23 ರಾಜ್ಯದಲ್ಲಿ ಬಿಜೆಪಿ ಜೊತೆ ಸಕರ್ಾರ ರಚಿಸುವ ಮೂಲಕ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಜನತೆ ಮಾತ್ರವಲ್ಲದೆ ಮತ್ತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರಿಗೂ ಮಹಾ ದ್ರೋಹ ಬಗೆದಿದ್ದಾರೆ ಎಂದು ಶಿವಸೇನೆ ತೀವ್ರ ವಾಗ್ದಾಳಿ ಮಾಡಿದೆ. ಈ ಕುರಿತು ಮಾತನಾಡಿದ ಪಕ್ಷದ ನಾಯಕ ಸಂಜಯ್ ರಾವತ್, ನಿನ್ನೆ ತನಕ ಎನ್ಸಿಪಿಯ ಸಭೆಯಲ್ಲಿ ಅಜಿತ್ ಪವಾರ್ ಸಭೆಯಲ್ಲಿ ಪಾಲ್ಗೊಂಡು ಸೇನಾ ಸರಕಾರ ಸ್ಥಾಪಿಸಲು ಸಹಕಾರ ಕೊಡುವುದಾಗಿ ಹೇಳಿ ನಂತರ ಈಗ ಜನರಿಗೆ ಮೋಸ ಮಾಡಿದ್ದಾರೆ ಮತ್ತು ಅವರು ಪಕ್ಷದ ನಾಯಕ ಶರದ್ ಪವಾರ್ ಅವರಿಗೂ ಮೋಸ ಮಾಡಿದ್ದಾರೆ ಅವರು ಕಿಡಿಕಾರಿದರು. ಅವರ ಕಾರ್ಯವೈಖರಿಯ ಬಗ್ಗೆ ಅನುಮಾನವಿತ್ತು. ಇಂದು ನಡೆದಿರುವ ರಾಜಕೀಯ ಘಟನೆಯಲ್ಲಿ ಶರದ್ ಪವಾರ್ ಅವರ ಪಾತ್ರವಿಲ್ಲ . ಅಜಿತ್ ಪವಾರ್ ಜನತೆಗೆ ಹಾಗೂ ಚಿಕ್ಕಪ್ಪ ಶರದ್ ಪವಾರ್ ಅವರಿಗೆ ಮೋಸ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜಭವನದ ದುರುಪಯೋಗ ಮಾಡಿಕೊಂಡು ನಂತರ ರಾಜಕೀಯ ಲಾಭ ಪಡೆದುಕೊಂಡಿದೆ. ಅಜಿತ್ ಜೈಲುವಾಸ ಅನುಭವಿಸಬಹುದೆಂದು ಅಲೋಚನೆ ಮಾಡಿ ಅದರಿಂದ ಬಚಾವ್ ಆಗಲು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ದೂರಿದರು. ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ನಡುವೆ ದೂರವಾಣಿ ಸಂಭಾಷಣೆ ಇಂದು ಬೆಳಿಗ್ಗೆ ಎರಡು ಬಾರಿ ನಡೆದಿದೆ. ಬಿಜೆಪಿಯನ್ನು ಬೆಂಬಲಿಸುವ ಕಾರ್ಯದಲ್ಲಿ ಯಾವುದೇ ಕಾರಣಕ್ಕೂ ಶರದ್ ಪವಾರ್ ಅವರ ಕೈವಾಡವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ಹೋಗಿರುವ ಶಾಸಕರು ಮಹಾರಾಷ್ಟ್ರದ ಜನರನ್ನು ಅವಮಾನಿಸಿದ್ದಾರೆ ಮತ್ತು ಜನರು ಖಂಡಿತವಾಗಿಯೂ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.