ರಣಬೀರ್ ಜೊತೆಗೆ ತೆರೆ ಹಂಚಿಕೊಳ್ಳಲಿರುವ ಅಜಯ್ ದೇವಗನ್

 ಮುಂಬೈ, ಡಿ.29      ಬಾಲಿವುಡ್ ನ ಸಿಂಗಮ್ ಸ್ಟಾರ್ ಅಜಯ್ ದೇವಗನ್, ರಾಕ್ ಸ್ಟಾರ್ ರಣಬೀರ್ ಕಪೂರ್ ಅವರೊಂದಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.     ಪ್ಯಾರ್ ಕಾ ಪಂಚನಾಮ, ಸೋನು ಕಿ ಟಿಟೂ ಕಿ ಸ್ವೀಟಿ ಚಿತ್ರಗಳನ್ನು ನಿರ್ದೇಶಿಸಿರಯವ ಲವ್ ರಂಜನ್ ಸದ್ಯದಲ್ಲಿ ದೊಡ್ಡ ಪ್ರಾಜಕ್ಟ್ ಗೆ ಕೈ ಹಾಕಿದ್ದಾರೆ. ಈ ಚಿತ್ರಕ್ಕಾಗಿ ಅಜಯ್ ದೇವಗನ್ ಹಾಗೂ ರಣಬೀರ್ ಕಪೂರ್ ಅವರನ್ನು ಸೇರಿಸಿಕೊಳ್ಳಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಈ ಮೊದಲು ಈ ಇಬ್ಬರು ನಾಯಕರು ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿರಲಿಲ್ಲ ಎಂದು ತಿಳಿದು ಬಂದಿತ್ತು. ಆದರೆ ಈಗ ಇಬ್ಬರೂ ನಾಯಕರು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.     ಲವ್ ರಂಜನ್ ಅವರ ಚಿತ್ರದ ಚಿತ್ರಿಕರಣ ಮುಂದಿನ ವರ್ಷದ ಕೊನೆಯಲ್ಲಿ ಆರಂಭವಾಗಲಿದೆ ಎಂದು ಅಜಯ್ ದೇವಗನ್ ಅವರು ಹೇಳಿದ್ದಾರೆ. ನಾನು ನನ್ನ ಕೆಲಸಗಳಲ್ಲಿ ಬ್ಯೂಸಿ ಇದ್ದೆ. ಹೀಗಾಗಿ ಚಿತ್ರಿಕರಣದ ದಿನಾಂಕ ಮುಂದೆ ಹೋಗುತ್ತಾ ಇತ್ತು. ಆದರೆ 2020ರ ಅಂತ್ಯದಲ್ಲಿ ಚಿತ್ರ ಸೆಟ್ ಏರ ಬಹುದು ಎಂದಿದ್ದಾರೆ.