ಚೀನಾಗೆ ವಿಮಾನಯಾನ ರದ್ದು ಹಿನ್ನೆಲೆ- ಗೋಏರ್ ನಿಂದ ಸಂಪೂರ್ಣ ಹಣ ವಾಪಾಸ್

ಹೈದರಾಬಾದ್, ಫೆ 4 :     ಚೀನಾದಲ್ಲಿ ಕೊರೋನಾ ವೈರಾಣು ಸೋಂಕು ವ್ಯಾಪಿಸಿರುವ ಹಿನ್ನೆಲೆಯಲ್ಲಿ, ಅಲ್ಲಿಗೆ ತೆರಳವು ವಿಮಾನ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ. ಇದೊಂದಿಗೆ ಸಿಂಗಾಪುರ, ಬಾಂಕಾಕ್ ಮತ್ತು ಫುಕೆಟ್ ವಿಮಾನಗಳನ್ನು ಕೂಡ ಸ್ಥಗಿತಗೊಳಿಸಿದ್ದು, ಪ್ರಯಾಣಿಕರಿಗೆ ಸಂಪೂರ್ಣ ಹಣ ಮರುಪಾವತಿಸಲು ಗೋಏರ್ ವಿಮಾನಯಾನ ಸಂಸ್ಥೆ ಮುಂದಾಗಿದೆ. 

ಫೆ. 29ರವರೆಗೆ ಕಾಯ್ದರಿಸಿದ್ದ ವಿಮಾನ ಪ್ರಯಾಣದ ಟಿಕೆಟ್ ದರವನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗುವುದು. ಈಗಾಗಲೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು,  ಫೆ. 29ರೊಳಗೆ ಮರಳುವ ಟಿಕೆಟ್ ಕಾಯ್ದಿರಿಸಿದವರಿಗೂ ಇದು ಅನ್ವಯವಾಗುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.