ಮುಂಬೈ, ಡಿ 17: ನಿಷ್ಕ್ರಿಯಗೊಂಡಿರುವ ವಿಮಾನ ವಾಹಕ ನೌಕೆ ವಿರಾಟ್ ಅನ್ನು ಮಂಗಳವಾರ ಇ-ಹರಾಜು ಹಾಕಲಾಗುತ್ತಿದೆ. ಆರು ತಿಂಗಳ ಹಿಂದೆ ಸರ್ಕಾರ ಈ ವಿಮಾನವನ್ನು ನಿಷ್ಕ್ರಿಯ ಎಂದು ಘೋಷಿಸಿತ್ತು. ಮೆಟಲ್ಸ್ ಆಂಡ್ ಸ್ಕ್ರಾಪ್ ಟ್ರೇಡಿಂಗ್ ಕಾರ್ಪೋರೇಷನ್ (ಎಂಎಸ್ ಟಿಸಿ) ಮಧ್ಯಾಹ್ನ 12ರಿಂದ 2ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಡುಗು ವಿಶ್ವದ ಯುದ್ಧದ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಅತ್ಯಂತ ಹಳೆಯ ನೌಕೆ ಎಂಬ ಗಿನ್ನೀಸ್ ದಾಖಲೆಗೆ ಪಾತ್ರವಾಗಿದೆ. 1959ರಲ್ಲಿ ಇದನ್ನು ಬ್ರಿಟೀಷ್ ನೌಕಾಪಡೆಗೆ ಸೇರಿಸಲಾಗಿತ್ತು ನಂತರ ಅದನ್ನು 1987ರಲ್ಲಿ ಭಾರತೀಯ ನೌಕಾಪಡೆಗೆ ಸೇರಿಸಿ, ಐಎನ್ ಎಸ್ ವಿರಾಟ್ ಎಂದು ನಾಮಕರಣ ಮಾಡಲಾಗಿತ್ತು. ಸತತ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ವಿರಾಟ್ ಅನ್ನು 2017ರಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು.