ನವದೆಹಲಿ, ನವೆಂಬರ್ 29 -ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿವಾರಿಸಿ, ಕೇಂದ್ರ ವಲಯದ ಯೋಜನೆ ಜಾರಿಗೆ ತರಲು ಸರ್ಕಾರ 1151 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ ಎಂದು ಸರಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ ಪ್ರಶ್ನೊತ್ತರ ಸಮಯದಲ್ಲಿ ಈ ವಿಷಯ ತಿಳಿಸಿದ ಪಂಚಾಯತಿ ರಾಜ್, ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಪರಶೋತ್ತಮ್ ರೂಪಾಲಾ, ವಾಯುಮಾಲಿನ್ಯ ತಡೆಯಲು ಮತ್ತು ಕೂಳೆ ಬೆಳೆಗಳನ್ನು ನಾಶಪಡಿಸಲು ಸ್ಥಳ ನಿರ್ವಹಣೆ ಮತ್ತು ಅಗತ್ಯವಾದ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡುವುದಾಗಿ ಸಚಿವರು ಹೇಳಿದರು.
2018-19ರಿಂದ 2019-20ರ ಅವಧಿಯಲ್ಲಿ ದೆಹಲಿಯ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ದೆಹಲಿಯ ವಲಯದಲ್ಲಿ ಕೂಳೆ ಬೆಳೆ ನಿರ್ವಹಣೆಗೆ ಕೃಷಿ ಯಾಂತ್ರಿಕತೆಯ ಉತ್ತೇಜನ ಕುರಿತು ಕೇಂದ್ರ ವಲಯದ ಯೋಜನೆ ಜಾರಿಗಾಗಿ ಸರಕಾರ 1151ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಅವರು ಹೇಳಿದರು.
ಈ ನಿಧಿಯ ಪೈಕಿ, 2018-19ರ ಅವಧಿಯಲ್ಲಿ ರಾಜ್ಯ ಸರ್ಕಾರಗಳು ರೈತರ ಬೆಳೆ ಉಳಿಕೆಗಳ ಸ್ಥಳ ಸ್ಚಚ್ಚತೆಗೆ ಮತ್ತು ನಿರ್ವಹಣೆಗಾಗಿ ರೈತರಿಗೆ 56290 ಕ್ಕೂ ಹೆಚ್ಚು ಯಂತ್ರಗಳನ್ನು ಪೂರೈಸಲಾಗಿದೆ.
2019-20ರ ಅವಧಿಯಲ್ಲಿ 32,808 ಕ್ಕೂ ಹೆಚ್ಚು ಯಂತ್ರಗಳನ್ನು ಸರಬರಾಜು ಮಾಡಲಾಗಿದೆ ಎಂದು ಅವರು ಹೇಳಿದರು.
ರೈತರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು) ಬೃಹತ್ ಪ್ರಮಾಣದಲ್ಲಿ ಮಾಹಿತಿ, ಶಿಕ್ಷಣ ಮತ್ತು ಅನೇಕ ಸಂವಾದ ಚಟುವಟಿಕೆಗಳನ್ನು ಕೈಗೊಂಡಿವೆ ಎಂದೂ ಸಚಿವರು ಸದನಕ್ಕೆ ಮಾಹಿತಿ ನೀಡಿದರು.