ಶಿಲ್ಲಾಂಗ್, ಫೆ 1 - ಭಾರತೀಯ ವಾಯುಪಡೆಯು ಮೇಘಾಲಯದ ಅಪ್ಪರ್ ಶಿಲ್ಲಾಂಗ್ ನ ಈಸ್ಟ್ರನ್ ಏರ್ ಕಮಾಂಡ್ ಕ್ಯಾಪಂಸ್ ನಲ್ಲಿ ‘ಅತಿಕ್ರಮಣಕಾರ ಮೇಲೆ ಗುಂಡಿಕ್ಕಿ ಹೊಡೆಯಲಾಗುವುದು’ ಎಂದು ನಾಗರಿಕರಿಗೆ ಎಚ್ಚರಿಕೆ ನೀಡುವ ಪೋಸ್ಟರ್ ಎಂದು ಆರೋಪಿಸಲಾಗಿದೆ.
ಅಪ್ಪರ್ ಶಿಲ್ಲಾಂಗ್ ನ ಈಸ್ಟ್ರನ್ ಏರ್ ಕಮಾಂಡ್ ಕೇಂದ್ರ ಕಚೇರಿಯ ಕಾಂಪೌಂಡ್ ಮೇಲೆ ‘ಅತಿಕ್ರಮಣಕಾರರನ್ನು ಗುಂಡಿಕ್ಕಿ ಹೊಡೆಯಲಾಗುವುದು’ ಎಂಬ ಪೋಸ್ಟರ್ ಗಳನ್ನು ಅಂಟಿಸಲಾಗಿದೆ ಎಂದು ಖಾಸಿ-ಜೈಂತಿಯ ಮತ್ತು ಗಾರೊ ಪೀಪಲ್ ಒಕ್ಕೂಟ (ಎಫ್ ಕೆಜೆಜಿಪಿ) ಆರೋಪಿಸಿದೆ.
‘ರಕ್ಷಣಾ ಇಲಾಖೆಗೆ ಸೇರಿದ ಸ್ಥಳಗಳನ್ನು ಅತಿಕ್ರಮಣ ಮಾಡುವುದು ಕ್ರಿಮಿನಲ್ ಅಪರಾಧವೆಂದು ನಮಗೆ ಗೊತ್ತಿದೆ. ಆದರೆ, ವಾಯುಪಡೆ ಮೇಲೆ ಸ್ಥಳೀಯರು ಇದುವರೆಗೆ ಯಾವುದೇ ವೈಮನಸ್ಯ ಹೊಂದಿಲ್ಲವಾದರೂ, 1963ರಲ್ಲಿ ಈಸ್ಟ್ರನ್ ಏರ್ ಕಮಾಂಡ್ ಈ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ ಯಾವುದೇ ಅತಿಕ್ರಮಣ ನಡೆಯದಿದ್ದರೂ ‘ಗುಂಡಿಕ್ಕಿ ಹೊಡೆಯಲಾಗುವುದು’ ಎಂಬ ಇಂತಹ ಬೆದರಿಕೆಯಿಂದ ಜನರು ಆತಂಕಗೊಂಡಿದ್ದಾರೆ.’ ಎಂದು ಎಫ್ ಕೆಜೆಜಿಪಿ ಹೇಳಿಕೆಯಲ್ಲಿ ಹೇಳಿದೆ.