ಲೋಕದರ್ಶನ ವರದಿ
ಮೋಳೆ 24: ಉತ್ತರ ಕನರ್ಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿರುವ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಏರ್ಪಡಿಸುತ್ತಿರುವ 27 ನೇ ಬೃಹತ್ ಕೃಷಿ ಮೇಳಕ್ಕೆ ಮಂಗಳವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿದರ್ೆಶಕ ಅಣ್ಣಾಸಾಬ ಡೂಗನವರ ಕೃಷಿ ಮೇಳದ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಜ.15 ರಿಂದ ರಿಂದ 19 ರವರೆಗೆ ನಡೆಯಲಿರುವ 50ನೇ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ 5 ದಿನಗಳ ಕಾಲ ಕೃಷಿ ಮೇಳ ಜರುಗಲಿದೆ.
20 ಎಕ್ಕರ ಕ್ಷೇತ್ರ ಹೊಂದಿರುವ ಐನಾಪುರದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿಸ್ಟಾಲ್ ಗಳನ್ನು ಹಾಕಲು ಇಂದು ಭೂಮಿ ಪೂಜೆ ನೆರವೇರಿಸಿದರು.
ಪೂಜೆ ನೆರವೇಕ., ರಿಸಿ ಮಾತನಾಡಿದ ಅಣ್ಣಾಸಾಬ ಡೂಗನವರ ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೆ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಗ್ರಾಮಸ್ಥರ ಸಹಾಯ ಸಹಕಾರ ಪಡೆದು ಕಳೆದ 26 ವರ್ಷಗಳಿಂದ ಯಶಸ್ವಿಯಾಗಿ ಕೃಷಿ ಮೇಳವನ್ನು ನಡೆಸುತ್ತ ಬಂದಿದ್ದೇವೆ. ಅದರಂತೆ ಈ ಬಾರಿಯೂ 26ನೇ ಕೃಷಿ ಮೇಳವನ್ನು ಯಶಸ್ವಿಯಾಗಿ ಮಾಡುವುದಾಗಿ ಹೇಳಿದರು.
20 ಎಕ್ಕರ ಕ್ಷೇತ್ರದಲ್ಲಿ 150 ಸ್ಟಾಲ್ಗಳನ್ನು ಹಾಕಲಾಗುತ್ತಿದ್ದು, ಇಗಾಗಲೇ ವಿವಿಧ ಕಂಪನಿಗಳು 100ಕ್ಕೂ ಹೆಚ್ಚು ಸ್ಟಾಲ್ಗಳನ್ನು ಬುಕ್ ಮಾಡಿದ್ದಾರೆಂದರು. ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಗೋಕಾಕ, ಬಾಗಲಕೊಟ, ಮಹಾರಾಷ್ಟ್ರದ ಪುಣೆ, ಕೊಲ್ಹಾಪೂರ,ಸಾಂಗಲಿ, ಇಚಲಕರಂಜಿ ಸೇರಿದಂತೆ ವಿವಿಧ ಬಾಗಗಲಿಂದ ಹಲವಾರು ಕಂಪನಿಗಳ ಮಾಲಿಕರು ಸ್ಟಾಲ್ ಗಳನ್ನು ಬುಕ್ ಮಾಡಿದ್ದಾರೆ ಎಂದು ವಿವರಿಸಿದ ಅವರು ಜನೇವರಿ 13ಕ್ಕೆ ಸ್ಟಾಲ್ಗಳು ತಯಾರಾಗಲಿವೆ ಎಂದರು.
ಈ ವೇಳೆ ಕೃಷಿ ಮೇಳದ ರೂವಾರಿ ಬಾಹುಬಲಿ ಕುಸನಾಳೆ, ಗುರುರಾಜ ಮಡಿವಾಳರ, ಪದ್ದು ಲಿಂಬಿಕಾಯಿ, ಮಂಜುನಾಥ ಕುಚನೂರೆ.ಮಲ್ಲು ಕೋಲಾರ,, ಶಂಕರ ಕೋಬರ್ು, ಸಿದ್ದು ಅಡಿಸೇರಿ, ಸಮೀರ ಕುಚನೂರೆ, ಪ್ರದೀಪ ಬಡಿಗೇರ, ಅಶೋಕ ಭೋಸಗೆ, ಸಾಗರ ಕೋಬರ್ು, ಮಂಜು ಬಿಷ್ಟಾಣಿ, ವಿಕಾಸ ಜಾಧವ, ಸಿದ್ದಾಂತ ಪಾಟೀಲ, ಸತೀಶ ಕುಸನಾಳೆ, ಸುನೀಲ ಬಾಳಿಕಾಯಿ,ಸೇರಿದಂತೆ ಹಲವಾರು ಯುವಕರು ಪಾಲ್ಗೊಂಡಿದ್ದರು. ಸೇರಿದಂತೆ ಅನೇಕರು ಇದ್ದರು.
ಈ ಕೃಷಿಮೇಳದಲ್ಲಿ ಭಾಗವಹಿಸಲಿಚ್ಚಿಸುವವರು ಗುರುರಾಜ ಮಡಿವಾಳರ 9449796126, ಬಾಹುಬಲಿ ಕುಸನಾಳೆ 7829292949ಈ ಮೋಬೈಲ್ ಗೆ ಸಂಪಕರ್ಿಸಲು ಕೋರಿದ್ದಾರೆ.