ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ
ಇಂಡಿ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ವಿಜಯಪೂರ ಜಿಲ್ಲಾ ಸಮಿತಿ ವತಿಯಿಂದ ಸೋಮವಾರದಿಂದ ಚಳಿಯನ್ನು ಲೆಕ್ಕಿಸದೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ವಿಜಯಪೂರ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ ಆವರಣದ ಮುಂಬಾಗದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಾಗಳ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಾಹಾತ್ಮಗಾಂಧಿ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧರಣಿ ಸತ್ಯಾಗ್ರಹ ಆರಂಭಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಐಟಿಯು ಇಂಡಿ ತಾಲೂಕು ಘಟಕ ಅಧ್ಯಕ್ಷರು ಹಾಗೂ ಜಿಲ್ಲಾ ಗೌರವಾಧ್ಯಕ್ಷರಾದ ಭಾರತಿ ವಾಲಿ ಅವರು ನಾವು ನಾಯ್ಯಯುತವಾಗಿ ಹೋರಾಟ ಮಾಡುತ್ತಿದ್ದೆವೆ ಗುಜರಾತ್ ಹೈಕೋರ್ಟ್ ತೀರ್ಿನಂತೆ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂ ಮಾಡಬೇಕು.2023ರ ಆದೇಶದ ಪ್ರಕಾರ ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು.2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ 15000 ಸಾವಿರ ರೂಪಾಯಿ ಗೌರವಧನ ಹೆಚ್ಚಿಸಬೇಕು.ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಒಟ್ಟು ಇಪ್ಪತ್ತು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿ ವರ್ಷ ಹೋರಾಟ ಮಾಡುತ್ತಿದ್ದೆವೆ ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮ ಹೋರಾಟಕ್ಕೆ ಕ್ಯಾರೇ ಅನ್ನುತ್ತಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ಸತ್ಯಾಗ್ರಹದಲ್ಲಿ ಅಣ್ಣಾರಾಯ ಕೊಳಗೇರಿ ಲಕ್ಷ್ಮಣ ಹಂದ್ರಾಳ ಸುನಂದಾ ನಾಯಕ ಪ್ರತಿಭಾ ಕುರಡೆ ಅಶ್ವಿನಿ ತಳವಾರ ಭೀಮರಾಯ ಪೂಜಾರಿ ಗೋಪಾಲ ಶಿವಗದ್ದಗೆ , ಕಲಾವತಿ ಕೂಡಿಗಿನೂರ ಶಾರದಾ ತಾಂಬೆ ಸುಜಾತಾ ಬಿರಾದಾರ ದ್ರಾಕ್ಷೀಣಿ ಅವಟಿ ಪದ್ಮಾವತಿ ಬಿರಾದಾರ ಸರು ಅವಟಿ ಫರೀಜಾನ ಶೇಖ ಗೀರಿಜಾ ಸಕ್ಕರಿ ರೇಖಾ ಕಬಡ್ಡಿ ಸರೋಜಿನಿ ಪಾಟೀಲ ಶಾಂತಾ ತಳವಾರ ಸಾವಿತ್ರಿ ಭೈರಗೊಂಡ ಶಿವಲೀಲಾ ಕಲ್ಯಾಣ ಶೆಟ್ಟಿ ಸರೋಜಿನಿ ಜೋಶಿ ಸೇರಿದಂತೆ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಉಪಸ್ಥಿತರಿದ್ದರು.