ಲೋಕದರ್ಶನವರದಿ
ರಾಣೇಬೆನ್ನೂರು ಜೂ.27: ನಗರದ ಮಿನಿ ವಿಧಾನಸೌಧದ ಎದುರುಗಡೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಬುಧವಾರ ಜಿಲ್ಲೆಯ ಜನತೆಗೆ ಮರಳು ಪೂರೈಸುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಆಹೋರಾತ್ರಿ ಧರಣಿ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಜಿಲ್ಲೆಯಾಧ್ಯಂತ ಬಡವರು, ಮಧ್ಯಮ ವರ್ಗದವರು, ರೈತರು, ಕೂಲಿ ಕಾಮರ್ಿಕರು ಒಂದು ಶೌಚಾಲಯ ಕಟ್ಟಿಕೊಳ್ಳಲು ಮರಳು ಸಿಗದಂತಾಗಿದೆ.
ಆಶ್ರಯ ಮನೆಗಳು ಮಂಜೂರಾಗಿದ್ದರೂ ಮರಳು ಸಿಗದ ಕಾರಣ ಮುಂದಿನ ಹಂತ ತಲುಪಿಲ್ಲ. ಜನಪ್ರತಿನಿಧಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಸಮರ್ಪಕವಾಗಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಂಜು ಓಲೇಕಾರ, ಕುಮಾರ ತಳವಾರ, ನಿಂಗಪ್ಪ ಬಣಕಾರ, ಶಂಕ್ರಪ್ಪ ಚಿಗರಿ, ಕಂಚಪ್ಪ ಕುರುಬರ, ಅಡಿವೆಪ್ಪ ಹಳೇಮನಿ, ಮಲ್ಲನಗೌಡ ಆರ್.ಎಚ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.